ಬಿಗ್ ಬಾಸ್ ಮನೆ (Bigg Boss House) ಆಟ ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಡ್ತಿದ್ದಂತೆ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್‌ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ (Divya Uruduga) ಮತ್ತು ಅರವಿಂದ್ (Aravind Kp) ಮದುವೆಯಾದರೆ ಡಿವೋರ್ಸ್ (Divorce) ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ (Love Birds) ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಜರ್ನಿಯ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಳ್ಳುವಾಗ ದಿವ್ಯಾ, ಅರವಿಂದ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ
ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.
ಇನ್ನೂ ದಿವ್ಯಾ ಉರುಡುಗ ಕೂಡ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ರಾಜಣ್ಣ, ದೀಪಿಕಾ, ದಿವ್ಯಾ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕಿದೆ. ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.