ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಬೆಡಗಿ ಅಂಕಿತಾ ಲೋಖಂಡೆ

Public TV
2 Min Read
Ankita Lokhande

ಬಾಲಿವುಡ್ ಬೆಡಗಿ ಅಂಕಿತಾ ಲೋಖಂಡೆ (Ankita Lokhande) ಇದೀಗ ಬಿಗ್ ಬಾಸ್ ಶೋ (Bigg Boss Hindi 17) ಮುಗಿದ ಮೇಲೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಜೋಡಿಯಾಗಿ ದೊಡ್ಮನೆಗೆ ಸ್ಪರ್ಧಿಯಾಗಿ ಹೋಗಿದ್ದ ಅಂಕಿತಾ ಮತ್ತು ವಿಕ್ಕಿ ಜೈನ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಮದುವೆಯಾಗಿ 6 ವರ್ಷ ಪೂರೈಸಿದ ಖುಷಿಯಲ್ಲಿರುವ ಅಂಕಿತಾ ದಂಪತಿ ಬೆಡ್‌ರೂಮ್ ಫೋಟೋ ಶೇರ್ ಮಾಡಿದ್ದಾರೆ.

Ankita Lokhande 4

ಅಂಕಿತಾ ಮತ್ತು ವಿಕ್ಕಿ ಜೈನ್ (Vicky Jain) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟು 6 ವರ್ಷ ಪೂರೈಸಿದೆ. ತಮ್ಮ ಮದುವೆಯ ದಿನವನ್ನು ಕೇಕ್ ಕತ್ತರಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡುವ ಹಾಗೆಯೇ ಈಗಲೂ ಮಾಡಿದ್ದಾರೆ. ಇಬ್ಬರೂ ಖುಷಿಯಿಂದ ಕುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ- ನೋರಾ ಫತೇಹಿ ಸ್ಫೋಟಕ ಹೇಳಿಕೆ

Ankita Lokhande 3

ಈ ಫೋಟೋ ನೋಡ್ತಿದ್ದಂತೆ, ಇದು ಫಸ್ಟ್ ನೈಟ್ ಫೋಟೋನಾ ಎಂದಿದ್ದಾರೆ. ಇನ್ನೂ ಕೆಲವರು, ನನಗೆ ಕನ್ಫೂಸ್ ಆಗುತ್ತಿದೆ. ನೀವು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡುತ್ತಿದ್ದೀರಿ. ಈಗ ಹೇಗೆ ಖುಷಿಯಾಗಿದ್ದೀರಾ ಎಂದು ಕಾಲೆಳೆದಿದ್ದಾರೆ.

Ankita Lokhande 2

ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಮೇಲೆ ಅಂಕಿತಾ ಬಾಲಿವುಡ್ ಸಿನಿಮಾಗಳಿಗೆ ಭಾರೀ ಆರ‍್ಸ್ ಸಿಗುತ್ತಿದೆ. ವಿಕ್ಕಿ ಜೈನ್‌ಗೆ ರಿಯಾಲಿಟಿ ಶೋಗಳಿಂದ ಅವಕಾಶ ಅರಸಿ ಬರುತ್ತಿದೆ.

Ankita Lokhande 1

ವಿಕ್ಕಿ ಜೈನ್ ಈ ಬಾರಿ ಬಿಗ್ ಬಾಸ್ ಒಟಿಟಿ 3 ಸೀಸನ್‌ಗೂ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ವೇಳೆ ವಿಕ್ಕಿ ಜೈನ್ ಬಂದಿದ್ದೆ ಆಗಿದಲ್ಲಿ ಮನರಂಜನೆ ಗ್ಯಾರಂಟಿ.

ankita Lokhande

ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ (Bigg Boss) ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಸಾಥ್ ನೀಡುತ್ತಿದ್ದಾರೆ.

ankita Lokhande 1

ಅಂದಹಾಗೆ, ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್. ಅವರು ಬಟ್ಟೆಯ ಗುಣಮಟ್ಟವನ್ನು ವಿವರಿಸುವ ರೀತಿಯಿಂದ ಗಮನ ಸೆಳೆದಿದ್ದಾರೆ.

ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ.

Share This Article