ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 19ರ (Bigg Boss 19) ವಿನ್ನರ್ ಆಗಿ ಕಿರುತೆರೆ ನಟ ಗೌರವ್ ಖನ್ನಾ (Gaurav Khanna) ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಸ್ಪರ್ಧಿಗಳ ನಡುವೆ ರೋಮಾಂಚನಕಾರಿ ಹಣಾಹಣಿ ನಡೆಯಿತು. ಅಂತಿಮವಾಗಿ ಫರ್ಹಾನಾ ಭಟ್ ಮೊದಲ ರನ್ನರ್ ಅಪ್ ಆದರು.
ಆಗಸ್ಟ್ 24 ರಂದು 18 ಸ್ಪರ್ಧಿಗಳೊಂದಿಗೆ ಈ ಸೀಸನ್ ಆರಂಭಗೊಂಡಿತು. ಹೈ-ವೋಲ್ಟೇಜ್ ಡ್ರಾಮಾ, ಜಟಾಪಟಿ, ಜೋಡಿ ಮತ್ತು ಭಾವನಾತ್ಮಕ ಕ್ಷಣಗಳ ವೈಶಿಷ್ಟ್ಯತೆಯಿಂದ ಸೀಸನ್ ಕೂಡಿತ್ತು. ಮೂರು ತಿಂಗಳ ಕಾಲ, ಮನೆ ಸ್ನೇಹ, ಪೈಪೋಟಿ ಮತ್ತು ತೀವ್ರ ಸ್ಪರ್ಧೆಗಳಿಗೆ ಸಾಕ್ಷಿಯಾಯಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ – ಬೆಚ್ಚಿಬಿದ್ದ ಮನೆಮಂದಿ; ಚೀರಾಡಿದ ಚೈತ್ರಾ
ಆರಂಭದಲ್ಲಿ ಸಂಯಮದ ನಡವಳಿಕೆಯಿಂದಿದ್ದ ಗೌರವ್ ಖನ್ನಾ ಒಬ್ಬ ಅಸಾಧಾರಣ ಸ್ಪರ್ಧಿಯಾಗಿ ಹೊರಹೊಮ್ಮಿದರು. ಫರ್ಹಾನಾ ಭಟ್ ತಮ್ಮ ಗೇಮ್‌ನಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ಕೊನೆಗೆ ರನ್ನರ್ ಅಪ್ ಆದರು.
ಫೈನಲ್‌ನಲ್ಲಿ ಸರಣಿ ಎಲಿಮಿನೇಷನ್‌ಗಳು ನಡೆದವು. ಮೊದಲು ಅಮಲ್ ಮಲ್ಲಿಕ್ ಹೊರನಡೆದರು. ನಂತರ ತಾನ್ಯಾ ಮಿತ್ತಲ್ ಮತ್ತು ಪ್ರಣಿತ್ ಮೋರೆ ಔಟ್ ಆದರು. ಅಂತಿಮವಾಗಿ ಗೌರವ್ ಖನ್ನಾ ಟ್ರೋಫಿಯನ್ನು ಎತ್ತಿ ಹಿಡಿದರು. 50 ಲಕ್ಷ ರೂ. ನಗದು ಬಹುಮಾನವನ್ನು ಪಡೆದರು. ಇದನ್ನೂ ಓದಿ: ಕ್ಯಾಪ್ಟನ್ ಅಭಿ ಬಿಗ್ ಬಾಸ್ ಮನೆಯಿಂದ ಔಟ್

