ಹಿಂದಿ ಬಿಗ್ ಬಾಸ್ ಸೀಸನ್-19 ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ವಾರ ಗ್ರ್ಯಾಂಡ್ ಫಿನಾಲೆ ಇದ್ದು, ಈ ಭಾನುವಾರ ಕಪ್ ಗೆಲ್ಲುವವರು ಯಾರೆಂದು ತಿಳಿಯಲಿದೆ. ಕನ್ನಡದ ಬಿಗ್ ಬಾಸ್ ಸೀಸನ್-12 ಇದೀಗ 60 ದಿನಗಳನ್ನ ಪೂರೈಸಿದೆ. ಅತ್ತ ಹಿಂದಿ ಬಿಗ್‌ಬಾಸ್ ಕ್ಲೈಮ್ಯಾಕ್ಸ್ ತಲುಪಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನ ಮೂಡಿಸಿದೆ. ಟಾಪ್-5 ನಲ್ಲಿರುವ ಐವರ ಪೈಕಿ ಗೆಲ್ಲೋರ‍್ಯಾರು ಎನ್ನುವ ಪ್ರಶ್ನೆ ಎದ್ದಿದೆ.
ಸದ್ಯ ಮನೆಯೊಳಗೆ ಅಮಾಲ್ ಮಲ್ಲಿಕ್, ತಾನ್ಯಾ ಮಿತ್ತಲ್, ಪ್ರಣಿತ್ ಮೋರೆ, ಫರ್ಹಾನಾ ಭಟ್, ಮತ್ತು ಹಿಂದಿ ಕಿರುತೆರೆಯ ಶಾರುಖ್ ಖಾನ್ ಎಂದೇ ಕರೆಯಲ್ಪಡುವ ಗೌರವ್ ಖನ್ನಾ ಉಳಿದಿದ್ದಾರೆ. ಈ ಐದು ಜನರಲ್ಲಿ ಈ ಬಾರಿ ಹಲವರ ಪ್ರಕಾರ ಗೌರವ್ ಖನ್ನಾ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗ್ತಿವೆ.. ನಿಜಕ್ಕೂ ಗೌರವ್ ಖನ್ನಾ ಗೆಲ್ತಾರಾ ಎನ್ನುವ ಪ್ರಶ್ನೆಗೆ ಈ ಭಾನುವಾರ ಉತ್ತರ ಸಿಗಲಿದೆ. ಸದ್ಯ ಫಿನಾಲೆ ವೇದಿಕೆ ಸಜ್ಜಾಗಿದ್ದು, ಟಾಪ್-5 ಸ್ಪರ್ಧಿಗಳ ಎದೆಬಡಿತ ಜೋರಾಗಿದೆ.
ಅಂದಹಾಗೆ ಮೊದಲ ರನ್ನರ್ ಅಪ್ ಸ್ಥಾನ ತಾನ್ಯಾ ಮಿತ್ತಲ್ ಅವರ ಪಾಲಾದರೂ ಅಚ್ಚರಿ ಇಲ್ಲ. ಪ್ರಣಿತ್ ಮೋರೆ, ಫರ್ಹಾನಾ ಭಟ್, ಅಮಾಲ್ ಮಲ್ಲಿಕ್, ಈ ಲೆಕ್ಕಾಚಾರ ಉಲ್ಟಾ ಮಾಡಿ ಟ್ರೋಫಿ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ಭಾನುವಾರ “ಬಿಗ್ ಬಾಸ್” ಗ್ರ್ಯಾಂಡ್ ಫಿನಾಲೆ ರಾತ್ರಿ 9.30ಕ್ಕೆ ಆರಂಭವಾಗಲಿದ್ದು, ಭಾರೀ ಕುತೂಹಲವನ್ನ ಮೂಡಿಸಿದೆ. ಅಂದಹಾಗೆ ಈ ಬಾರಿಯ ಗ್ರ್ಯಾಂಡ್ ಫಿನಾಲೆಗೆ ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವಿಕೇಂಡ್ ಎಲ್ಲರ ಚಿತ್ತ ಹಿಂದಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮೇಲೆ ನೆಟ್ಟಿದೆ.

