ಮುಂಬೈ: ರಿಯಾಲಿಟಿ ಶೋಗಳಲ್ಲಿ ರಾಜ ಅಂತಾ ಕರೆಸಿಕೊಳ್ಳುವ ಬಿಗ್ ಬಾಸ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಿಂದಿಯ ಬಿಗ್‍ಬಾಸ್-12 ಗೋವಾದಲ್ಲಿ ನಡೆಯುತ್ತಿದ್ದು, ಈ ಬಾರಿಯೂ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಸಲ್ಮಾನ್ ಒಂದು ಸಂಚಿಕೆಗೆ 14 ಕೋಟಿ ರೂಪಾಯಿ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಬಾರಿಯ ಬಿಗ್‍ಬಾಸ್ ಒಟ್ಟು 13 ವಾರಗಳ ಕಾಲ ನಡೆಯಲಿದೆ. ಅಂದರೆ ಶನಿವಾರ ಮತ್ತು ಭಾನುವಾರ ಸಲ್ಮಾನ್ ನಿರೂಪಣೆಯಲ್ಲಿ ಶೋ ಮೂಡಿ ಬರಲಿದ್ದು, ಒಟ್ಟು 26 ಸಂಚಿಕೆ ಪ್ರಸಾರಗೊಳ್ಳಲಿವೆ. ಬಿಗ್‍ಬಾಸ್ ಸೀಸನ್ 12ರಲ್ಲಿ ಸಲ್ಮಾನ್ 364 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಪ್ರೋಮೋಗಳು ಪ್ರಸಾರಗೊಳ್ಳುತ್ತಿದ್ದು, 12ನೇ ಆವೃತ್ತಿಯಲ್ಲಿ 12 ಜೋಡಿಗಳು ಬಿಗ್ ಮನೆಯನ್ನು ಪ್ರವೇಶಿಸಲಿವೆ ಎನ್ನಲಾಗುತ್ತಿದೆ.

ಸೀಸನ್ 11ರಲ್ಲಿ ಸಲ್ಮಾನ್ ಒಂದು ಸಂಚಿಕೆಗೆ 12 ಕೋಟಿ ಪಡೆದಿದ್ದರು. ಈ ವರ್ಷ 2 ಕೋಟಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು ಸಿಗಲಿದೆ. ಸೀಸನ್ 4ರಿಂದ 6ರವರೆಗೆ ಸಂಚಿಕೆಗೆ ಎರಡೂವರೆ ಕೋಟಿ ರೂ. ಪಡೆದಿದ್ದರು. ಸೀಸನ್ 8ರಲ್ಲಿ ಸಲ್ಮಾನ್ ತಮ್ಮ ಸಂಭಾವನೆಯನ್ನು ದ್ವಿಗುಣ ಮಾಡಿ ಸಂಚಿಕೆಗೆ 5 ಕೋಟಿ ಪಡೆದ್ರು. ಸೀಸನ್-9ಕ್ಕೆ 7 ಕೋಟಿ, ಸೀಸನ್ 10ಕ್ಕೆ 8 ಕೋಟಿ ಮತ್ತು ಸೀಸನ್ 11ಕ್ಕೆ 12 ಕೋಟಿ ರೂ. ಪಡೆದಿದ್ದಾರೆ.
ಈಗಾಗಲೇ ಯಶಸ್ವಿಯಾಗಿ 11 ಸೀಸನ್ ಗಳನ್ನು ಮುಗಿಸಿರುವ ಬಿಗ್‍ಬಾಸ್ ಈ ಬಾರಿ ತನ್ನ ವಿಭಿನ್ನ ಪ್ರೋಮೋಗಳ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಬಾರಿಯ ಬಿಗ್ ಬಾಸ್‍ನಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬುದನ್ನು ಇದೂವರೆಗೂ ಚಾನೆಲ್ ಹೇಳಿಕೊಂಡಿಲ್ಲ. ಇದೇ ಸೆಪ್ಟೆಂಬರ್ 16ರಿಂದ ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/ColorsTV/status/1038294235470913536
https://twitter.com/ColorsTV/status/1036879027015831553
https://twitter.com/ColorsTV/status/1036899838384848897

