ಬೆಂಗಳೂರು: ಬಿಗ್ ಬಾಸ್ (Bigg Boss) ಸ್ಪರ್ಧಿ ಧನರಾಜ್ (Dhanraj Acharya) ಅವರ ಪುತ್ರಿ ಪ್ರಸಿದ್ಧಿಗೆ ಗೋಲ್ಡ್ ಸುರೇಶ್ (Gold Suresh) ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಧನರಾಜ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಧನರಾಜ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಸುರೇಶ್ ಅವರು ತೊಟ್ಟಿಲನ್ನು ಹಸ್ತಾಂತರ ಮಾಡಿದ್ದಾರೆ.
Advertisement
ಬಿಗ್ ಬಾಸ್‌ನಲ್ಲಿಯಲ್ಲಿದ್ದಾಗ ಗೋಲ್ಡ್ ಸುರೇಶ್, ಧನರಾಜ್, ಹನುಮಂತ ಜೊತೆಯಾಗಿ ಹೆಚ್ಚು ಸಮಯ ಬೆರೆಯುತ್ತಿದ್ದರು. ಹನುಮಂತ (Hanumanthu) ಮತ್ತು ಧನರಾಜ್ ಅವರು ಸುರೇಶ್ ಅವರನ್ನು “ಮಾವ ಮಾವ” ಎಂದೇ ಕರೆಯುತ್ತಿದ್ದರು. ಇದನ್ನೂ ಓದಿ: BBK 11: ಸೊಸೆ ಹೇಗಿರಬೇಕು ಅಂತ ಸುಳಿವು ಕೊಟ್ಟ ಹನುಮಂತನ ತಾಯಿ
Advertisement
Advertisement
ಧನರಾಜ್ ಮತ್ತು ಸುರೇಶ್ ಮಾತುಕತೆಯ ಸಮಯದಲ್ಲಿ ಮಾವನಾಗಿ ನಾನು ನಿನ್ನ ಮಗಳಿಗೆ ತೊಟ್ಟಿಲು ನೀಡುತ್ತೇನೆ ಎಂದು ಹೇಳಿದ್ದರು. ಈ ಮಾತಿನಂತೆ ಗೋಲ್ಡ್ ಸುರೇಶ್ ಧನರಾಜ್ ನಿವಾಸಕ್ಕೆ ಆಗಮಿಸಿ ತೊಟ್ಟಿಲನ್ನು ನೀಡಿದ್ದಾರೆ.
Advertisement
ಬಿಗ್ ಬಾಸ್ ಮನೆಯಿಂದ ಸುರೇಶ್ ಅವರು ದಿಢೀರ್ ನಿರ್ಗಮಿಸಿದ್ದರು. 12ನೇ ವಾರದಲ್ಲಿ ನಿರ್ಗಮಿಸಿದ ಸಮಯದಲ್ಲಿ ಹಲವಾರು ಅಂತೆ ಕಂತೆ ಸುದ್ದಿಗಳು ಪ್ರಕಟವಾಗಿತ್ತು. ಈ ಅಂತೆ ಕಂತೆ ಸುದ್ದಿಗಳಿಗೆ ಸುರೇಶ್ ಅವರು ಸ್ಪಷ್ಟನೆ ನೀಡಿ ನಾನು ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ್ದು ಯಾಕೆ ಎಂದು ತಿಳಿಸಿದ್ದರು.
ನಾನು ಬಿಗ್ ಬಾಸ್ ಮನೆಗೆ ಹೋದರೆ ನನ್ನ ಬಿಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಎಂಬ ಯೋಚನೆ ನನಗೆ ಮೊದಲೇ ಬಂದಿತ್ತು. ಈ ಸಂದರ್ಭದಲ್ಲಿ ನನ್ನ ವ್ಯವಹಾರವನ್ನು ಪತ್ನಿಗೆ ಬಿಟ್ಟು ಹೋಗಿದ್ದೆ. ಆದರೆ ಆಕೆಗೆ ಬಿಸಿನೆಸ್ ಅನ್ನು ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ವ್ಯವಹಾರದ ಬಗ್ಗೆ ಜ್ಞಾನನೇ ಇಲ್ಲದಿರುವ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದು ತಿಳಿಸಿದ್ದರು.