ಬಿಗ್ ಬಾಸ್ ಮನೆಯಲ್ಲಿ ನಮ್ರತಾ- ಸ್ನೇಹಿತ್ (Snehith Gowda) ಜೋಡಿಯಾಗಿ ಹೈಲೆಟ್ ಆಗಿದ್ದರು. ದೊಡ್ಮನೆಯ ಆಟ ಮುಗಿದ ಮೇಲೆ ಸ್ನೇಹಿತ್- ನಮ್ರತಾ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಈ ವೇಳೆ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ವಿನಯ್ ಗುಂಪು ಮೈಸೂರಿಗೆ ಭೇಟಿ ನೀಡಿದ್ದರು. ತಂಡದ ಜೊತೆ ನಮ್ರತಾ ಕೂಡ ಹಾಜರಿ ಹಾಕಿದ್ದರು. ಆಗ ನಮ್ರತಾಗೆ (Namratha Gowda) ಸ್ನೇಹಿತ್ ಎಲ್ಲಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.
Advertisement
ವಿನಯ್, ರಕ್ಷಕ್, ಮೈಕಲ್ ಜೊತೆ ನಮ್ರತಾ ಕೂಡ ಮೈಸೂರಿಗೆ ಭೇಟಿ ನೀಡಿ, ಚಾಮುಂಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ನಮ್ರತಾ ಮತ್ತು ರಕ್ಷಕ್ ಸುತ್ತ ಜನ ಆವರಿಸಿದ್ದಾರೆ. ಆಗ ಸ್ನೇಹಿತ್ ಎಲ್ಲಿ ಎಂದು ನಮ್ರತಾಗೆ ಫ್ಯಾನ್ಸ್ ದಂಬಾಲು ಬಿದ್ದಿದ್ದಾರೆ.
Advertisement
Advertisement
ಸ್ನೇಹಿತ್ ಕುರಿತ ಅಭಿಮಾನಿಗಳ ಪ್ರಶ್ನೆಗೆ ನಮ್ರತಾ ಏನೂ ಉತ್ತರಿಸದೇ ನಗುತ್ತಲೇ ಮುಂದೆ ಸಾಗಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ನಿರ್ದೇಶಕ ಅಟ್ಲಿ ಸಿನಿಮಾದಲ್ಲಿ ಸಲ್ಮಾನ್ ಖಾನ್
Advertisement
View this post on Instagram
ಬಿಗ್ ಬಾಸ್ ಶೋ ಮುಗಿದ ಮೇಲೆ ಕೆಲ ದಿನಗಳ ಹಿಂದೆ ಕಾರ್ತಿಕ್, ನಮ್ರತಾ, ವಿನಯ್, ಸಂಗೀತಾ ಭೇಟಿಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆಯ ಗುಂಪು ರಕ್ಷಕ್, ವಿನಯ್, ನಮ್ರತಾ ಗೌಡ, ಇಶಾನಿ, ಮೈಕಲ್ ಅಜಯ್, ಪವಿ ಮತ್ತೆ ಭೇಟಿಯಾಗಿದ್ದರು. ಈ ತಂಡದ ಜೊತೆ ವಿನಯ್ ಪತ್ನಿ ಅಕ್ಷತಾ ಕೂಡ ಸಾಥ್ ನೀಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ಈ 3 ಗುಂಪುಗಳಾಗಿ ಹೈಲೆಟ್ ಆಗಿತ್ತು. ಸಂತು-ಪಂತು ಗುಂಪು, ಮತ್ತೊಂದು ಸಂಗೀತಾ, ಕಾರ್ತಿಕ್, ತನಿಷಾರ ಟ್ರಯೋ ಫ್ರೆಂಡ್ಶಿಪ್, ಹಾಗೆಯೇ ವಿನಯ್ ಗುಂಪಲ್ಲಿ ಇಶಾನಿ, ಮೈಕಲ್, ನಮ್ರತಾ, ರಕ್ಷಕ್, ಪವಿ, ಸ್ನೇಹಿತ್ ಗೌಡ ಹೈಲೆಟ್ ಆಗಿದ್ದರು. ಈಗ ಫೆ.3ರಂದು ಇದೇ ವಿನಯ್ ಟೀಮ್ ಭೇಟಿಯಾಗಿ ಕೆಲ ಸಮಯ ಕಾಲ ಕಳೆದಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸ್ನೇಹಿತ್ ಎಲ್ಲಿ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು.
ನಮ್ರತಾ ಜೊತೆಗೆ ಫ್ರೆಂಡ್ಶಿಪ್ ಬ್ರೇಕಪ್ ಆದ್ಮೇಲೆ ವಿನಯ್ ತಂಡದ ಜೊತೆ ಸ್ನೇಹಿತ್ ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಅದಕ್ಕೆ ‘ಬಿಗ್ ಬಾಸ್’ ಸ್ಪರ್ಧಿ ಪವಿ ಪೂವಪ್ಪ ಪ್ರತಿಕ್ರಿಯಿಸಿ ಎಲ್ಲರಿಗೂ ನಮಸ್ಕಾರ, ಸ್ನೇಹಿತ್ ಆ ದಿನ ಬ್ಯುಸಿಯಾಗಿದ್ದರು. ಹಾಗೆಯೇ ಅವರು ಪಾರ್ಟಿ ಮಾಡದ ಕಾರಣ ಬರಲಿಲ್ಲ. ಆದರೆ ಸ್ನೇಹಿತ್ ಯಾವಾಗಲೂ ನಮ್ಮ ಗುಂಪಿನಲ್ಲಿಯೇ ಇರುತ್ತಾರೆ ಎಂದು ಪವಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಈಗ ಸ್ನೇಹಿತ್ ಕುರಿತ ಪ್ರಶ್ನೆಯನ್ನು ನಮ್ರತಾಗೆ ನೇರವಾಗಿ ಅಭಿಮಾನಿಗಳು ಕೇಳಿ ಕಾಲೆಳೆದಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಮೇಲೆ ಸ್ನೇಹಿತ್ಗೆ ಲವ್ ಆಗಿತ್ತು. ದೊಡ್ಮನೆಯಲ್ಲಿ ಇರುವಾಗಲೇ ನಮ್ರತಾಗೆ ಹಲವು ಬಾರಿ ಸ್ನೇಹಿತ್ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಸ್ನೇಹಿತ್ ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟದ ಬಗ್ಗೆ ಭಾರೀ ಟ್ರೋಲ್ ಆಗಿತ್ತು. ಫಿನಾಲೆ ಕೊನೆಯ ವಾರದಲ್ಲಿ ಸ್ನೇಹಿತ್ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಕಾರ್ತಿಕ್ ಜೊತೆಗಿನ ಟ್ರೋಲ್ ಬಗ್ಗೆ ಸ್ನೇಹಿತ್ ಮಾತನಾಡಿದ ರೀತಿ ನಮ್ರತಾಗೆ ಘಾಸಿ ಆಗಿತ್ತು. ಬಿಗ್ ಬಾಸ್ ಶೋ ಮುಗಿದ ಮೇಲೆ ನಿಮ್ಮನ್ನು ಎಂದೂ ಭೇಟಿ ಮಾಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು ನಮ್ರತಾ.