ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಿಂದಿ ಬಿಗ್‍ಬಾಸ್ ಸೀಸನ್ 15ನೇ ಅವೃತ್ತಿಯ ನಿರೂಪಣೆಗಾಗಿ ಬರೋಬ್ಬರಿ 350 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
Advertisement
ನಟ ಸಲ್ಮಾನ್ ಖಾನ್ ಬಿಗ್‍ಬಾಸ್ ಸೀಸನ್ 15 ರ ಅವೃತ್ತಿಯಲ್ಲಿ ನಿರೂಪಣೆ ಮಾಡಲು ದೊಡ್ಡ ಮೊತ್ತವನ್ನು ಸಂಭಾವಣೆಯಾಗಿ ಪಡೆಯುತ್ತಿದ್ದಾರೆ. ವಾರಕ್ಕೆ 25 ಕೋಟಿಯಂತೆ ಒಟ್ಟು 14 ವಾರಕ್ಕೆ 350 ಕೋಟಿ ರೂ ಜೇಬಿಗಿಳಿಸಲಿದ್ದಾರೆ. ಜನಪ್ರಿಯ ಶೋ ಬಿಗ್‍ಬಾಸ್ 15 ರ ಅವೃತ್ತಿಯ ಶೂಟಿಂಗ್ ಅಕ್ಟೋಬರ್ ತಿಂಗಳಿನಿಂದ ಶುರುವಾಗಲಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ
Advertisement
Advertisement
ಪ್ರತಿ ಸೀಸನ್ ಕಳೆದಂತೆ ಬಿಗ್‍ಬಾಸ್ ಜನರನ್ನು ಹೆಚ್ಚು ರಂಜಿಸುತ್ತಿದ್ದು, ಟಿವಿ ಶೋಗಳಲ್ಲಿ ಅತ್ಯಂತ್ಯ ಯಶಸ್ವಿ ಮನರಂಜನೆ ಕಾರ್ಯಕ್ರಮವಾಗಿದೆ. ಕಳೆದ 11 ಸೀಸನ್‍ಗಳಲ್ಲಿ ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆದ್ದಿದ್ದ ಸಲ್ಮಾನ್ ಖಾನ್, ಈ ಬಾರಿಯೂ ಬಿಗ್‍ಬಾಸ್ ನಡೆಸಿಕೊಡಲಿದ್ದಾರೆ. ಈ ಹಿಂದೆ ನಾಲ್ಕು ಹಾಗೂ ಆರನೇ ಸೀಸನ್ ವೇಳೆ ಪ್ರತಿ ಎಪಿಸೋಡ್‍ಗೆ 2.5 ಕೋಟಿ ಪಡೆಯುತ್ತಿದ್ದ ಸಲ್ಮಾನ್ ಖಾನ್, 7ನೇ ಸೀಸನ್ ವೇಳೆಯಲ್ಲಿ 7 ಕೋಟಿ ಸಂಭಾವಣೆ ಪಡೆದಿದ್ದರು.ಇದನ್ನೂ ಓದಿ: ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?
Advertisement
ಸೀಸನ್ 13ರಲ್ಲಿ ವಾರಕ್ಕೆ 13 ಕೋಟಿ ಪಡೆಯುತ್ತಿದ್ದು, ಈ ಬಾರಿ ವಾರಕ್ಕೆ 25 ಕೋಟಿ ಸಂಭಾವಣೆ ಪಡೆಯುವ ಮೂಲಕ ತಮ್ಮ ಸಂಭಾವಣೆ ಹೆಚ್ಚು ಮಾಡಿಕೊಂಡಿದ್ದಾರೆ. ಸಲ್ಮಾನ್ ನಿರೂಪಣೆ ಶೈಲಿ, ಅವರ ಆಕರ್ಷಕ ವ್ಯಕ್ತಿತ್ವ, ಹಾಗೂ ಅವರ ಜನಪ್ರಿಯತೆ ಸಂಭಾವಣೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಮುಂದಿನ ತಿಂಗಳಿನಿಂದ ಹಿಂದಿ ಬಿಗ್‍ಬಾಸ್ 15ನೇ ಅವೃತ್ತಿ ಶೂಟಿಂಗ್ ಆರಂಭಗೊಳ್ಳಲಿದ್ದು, ಅಭಿಮಾನಿಗಳಿಗೆ ಬಿಗ್‍ಬಾಸ್‍ನಿಂದ ಮನರಂಜನೆ ಮಹಾಪೂರವೇ ಸಿಗಲಿದೆ.