ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ (Atul Subhash Suicide Case) ತನಿಖೆಗೆ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯನ್ನ ನೇಮಕ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮೊದಲು ಸಬ್ ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು, ಇದೀಗ ಪ್ರಕರಣ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿರುವ ಹಿನ್ನಲೆ, ಮಾರತಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ಗೆ ಅಧಿಕಾರಿ ತನಿಖೆ ಹೊಣೆ ನೀಡಲಾಗಿದೆ. ಈ ನಡುವೆ ಹೊಸ ಹೊಸ ವಿಚಾರಗಳು ಬೆಳಿಕೆ ಬಂದಿವೆ.
Advertisement
ರಾಷ್ಟ್ರಪತಿಗಳಿಗೆ ಇ-ಮೇಲ್:
ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ನಿಮಿಷಗಳಿಗೂ ಮುಂಚೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗೆ ಇ-ಮೇಲ್ ಕಳುಹಿಸಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್ ಮೇಲೆ ಕೇಸ್ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್
Advertisement
Advertisement
ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷದ ವೇಳೆಗೆ ʻನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ, ಮನಸ್ಸು ಮಾಡಿದ್ರೆ ದೇಶದಲ್ಲಿ ಬದಲಾವಣೆ ತರ್ಬೋದು, ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕುʼ ಎಂದು ಉಲ್ಲೇಖಿಸಿ ಮೇಲ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್‌ಗಳನ್ನ ಹಾಕಿದ್ದಾರೆಂದು ಎಂದು ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ರೀತಿಯ ಇ-ಮೇಲ್‌ವೊಂದನ್ನು ಸುಪ್ರೀಂ ಕೋರ್ಟ್ ಜಡ್ಜ್‌ಗೂ ಕಳುಹಿಸಿದ್ದಾರೆ ಅತುಲ್ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ
Advertisement
ಪ್ರಕರಣದ ಪ್ರಮುಖ ಅಂಶಗಳು:
* ನಿಖಿತಾ ಮತ್ತು ಸುಭಾಷ್ ಅತುಲ್ 26 ಏಪ್ರಿಲ್ 2019 ರಲ್ಲಿ ಮ್ಯಾಟ್ರಿಮೋನಿ ಮೂಲಕ ಮದುವೆ
* 2020 ರಲ್ಲಿ ಒಂದು ಗಂಡು ಮಗುವಿಗೆ ಜನ್ಮ
* 17 ಮಾರ್ಚ್ 2021 ರಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಪ್ರಾರಂಭ ಆಯ್ತು.. ನಿಖಿತಾ ದೂರಿನ ಪ್ರಕಾರ ಅತುಲ್ ಮತ್ತು ತಾಯಿಯಿಂದ ಹಲ್ಲೆ.
* 24 ಏಪ್ರಿಲ್ 2022 ರಲ್ಲಿ ಉತ್ತರ ಪ್ರದೇಶದ ಜೌನಪುರದಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿತ್ತು.
* ಈ ಪ್ರಕರಣದಲ್ಲಿ, ಅತುಲ್, ತಂದೆ – ತಾಯಿ, ಬಾಮೈದಾ ಎಲ್ಲರ ವಿರುದ್ಧ ದೂರು ದಾಖಲಾಗಿತ್ತು.
* ವರದಕ್ಷಿಣೆ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು.
* ಅತುಲ್ ತಂದೆ 10 ಲಕ್ಷ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರೆ ಎಂದು ಆರೋಪವಿತ್ತು.
* ಆಗಸ್ಟ್ 16, 2019 ರಂದು ನಿಖಿತಾ ಬಳಿ 10 ಲಕ್ಷ ಹಣಕ್ಕಾಗಿ ಬೇಡಿಕೆ
* ಹಣ ನೀಡದೇ ಇದ್ದಾಗ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ಆರೋಪ
* ಅತುಲ್ ಕುಡಿದು ನಿರಂತರವಾಗಿ ಹಲ್ಲೆ ನಡೆಸಿದ್ದ ಆರೋಪ
* ಅತುಲ್ ಕುಟುಂಬದ ಮಾನಸಿಕ ಕಿರುಕುಳಕ್ಕೆ ನಿಖಿತಾ ತಂದೆ ಆಗಸ್ಟ್ 17, 2019 ರಂದು ಸಾವನ್ನಪ್ಪಿದ ಆರೋಪ