ಉಡುಪಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಸಾವಿನ ಬಳಿಕ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಇದೀಗ ಕುಡಿತದ ಚಟವೇ ಸ್ವಾಮೀಜಿಗಳ ನಿಧನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಆರಂಭವಾಗಿದೆ.
ಶ್ರೀಗಳು ಆಪ್ತರೊಬ್ಬರು ಈ ಕುರಿತು ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸ್ವಾಮೀಜಿಗಳು ಕುಡಿತದ ದಾಸರಾಗಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ
Advertisement
ಆಡಿಯೋದಲ್ಲೇನಿದೆ?:
ಕುಡಿತ ಚಟದಿಂದ ಶ್ರೀಗಳ ಲಿವರ್‍ಗೆ ತೊಂದರೆ ಆಗಿತ್ತು. ಐದಾರು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಕುಡಿತದ ಚಟ ಬಿಟ್ರೆ ಹೆಚ್ಚು ವರ್ಷ ಬದುಕುತ್ತೀರಿ ಎಂದು ವೈದ್ಯರು ಹೇಳಿದ್ದರು. ಆದ್ರೆ ಮೂರೇ ತಿಂಗಳಿಗೆ ಮತ್ತೆ ಕುಡಿತ ಶುರು ಮಾಡಿದ್ರು ಅಂತ ಆಡಿಯೋದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್
Advertisement
ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಮೂಲದ ಮಹಿಳೆಯನ್ನು ಉಡುಪಿ ಪೋಲಿಸರು ವಿಚಾರಣೆ ಮಾಡ್ತಿದ್ದಾರೆ. ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ಮಾಡಲಾಗ್ತಿದೆ. ಇದನ್ನೂ ಓದಿ: ಉಡುಪಿಯ ಶಿರೂರು ಶ್ರೀಗಳು ವಿಧಿವಶ
Advertisement
https://www.youtube.com/watch?v=-p-dNCjn3ok