ಆಗಸ್ಟ್‌ನಲ್ಲಿ ರಾಜ್ಯ ರಾಜಕೀಯ ‘ಪಲ್ಲಟ’ – ಮತ್ತೆ ಆಪರೇಷನ್ ಕಮಲ ಸೂಚನೆ ಕೊಟ್ರ ಶಾ?

Public TV
1 Min Read
amit shah 2
ಬೆಂಗಳೂರು: ಲೋಕಸಭಾ ಚುನಾವಣೆಯ ಮೇಲೆ ಹೆಚ್ಚಿನ ಗಮನ ನೀಡಿ 25 ಸ್ಥಾನಗಳನ್ನು ಗೆದ್ದು ಬನ್ನಿ. ಆಗಸ್ಟ್ ತಿಂಗಳಿನಲ್ಲಿ ರಾಜ್ಯ ರಾಜಕೀಯದಲ್ಲಿ ಪಲ್ಲಟ್ಟ ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ನಾಯಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
 
ನಗರದಲ್ಲಿ ರಾಜ್ಯ ಸಂಸದರು, ಶಾಸಕರು, ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದ ಅಮಿತ್ ಶಾ ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆ ಕುರಿತು ಮಾಹಿತಿ ಪಡೆದರು. ಈ ವೇಳೆ ರಾಜ್ಯದ ನಾಯಕರಿಗೆ ಆತ್ಮವಿಶ್ವಾಸ ತುಂಬಿರುವ ಅಮಿತ್ ಶಾ ಅವರು, ಆಗಸ್ಟ್ ತಿಂಗಳ ತನಕ ಕಾದು ನೋಡಿ. ಅಧಿಕಾರದ ಸಿಹಿ ನಿಮಗೂ ಸಿಗುತ್ತೆ. ಆದರೆ ಸದ್ಯ ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದುಕೊಂಡು ಬನ್ನಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಮಾಹಿತಿ ಲಭಿಸಿದೆ.
bjp amit shah 1
ಆಗಸ್ಟ್ ತಿಂಗಳ ರಾಜಕೀಯ ಬದಲಾವಣೆ ಹೇಳಿಕೆ ಸಭೆಯಲ್ಲಿದ್ದ ಬಿಜೆಪಿ ನಾಯಕರಿಗೆ ತೀವ್ರ ಕೂತುಹಲ ಉಂಟು ಮಾಡಿದ್ದು, ಚುನಾವಣೆಗೆ ರಾಜ್ಯ ನಾಯಕರಲ್ಲಿ ಆತ್ಮವಿಶ್ವಾಸ ತುಂಬಿದ್ದರಾ ಅಥವಾ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ್ದರಾ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
 
ಯಲಹಂಕ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಸಂಸದರು, ಶಾಸಕರು, ಮುಖಂಡರು, ಭಾಗಿಯಾಗಿದ್ದರು. ಈ ವೇಳೆ ಲೋಕಸಭಾ ಚುನಾವಣೆ ಸಿದ್ಧತೆಯ ಪ್ರಗತಿ ಹಾಗೂ ಆಪರೇಷನ್ ಆಡಿಯೋ ಆರೋಪ ಪ್ರಕರಣದ ಬಗ್ಗೆ ಬಿಎಸ್ವೈ ಅವರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಇಂದಿನ ಸಭೆಗೆ ಶಾಸಕ ಶಿವನಗೌಡ ನಾಯಕ್ ಗೈರು ಹಾಜರಿ ಆಗಿದ್ದು, ಆಡಿಯೋ ಪ್ರಕರಣದ ವಿವಾದ ಕಾರಣ ಅಮಿತ್ ಶಾ ಅವರ ಬಳಿ ಎದುರಾಗುವ ಮುಜುಗರದಿಂದ ಗೈರಾಗಿದ್ದರಾ ಎಂಬ ಅನುಮಾನ ವ್ಯಕ್ತವಾಗಿದೆ.
bjp amit shah 2
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *