ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ನಾನೇ ಕಾರಣ ಅಂತ ಹಾಸನದ ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿರುವ ಆಡಿಯೋ ಕ್ಲಿಪ್ ಇದೀಗ ವಾಟ್ಸಪ್ ಮುಖಾಂತರ ಹರಿದಾಡುತ್ತಿದೆ.
ಬೇಲೂರು ತಾಲೂಕಿನ ಪಕ್ಷದ ಕಾರ್ಯಕರ್ತರೊಬ್ಬರೊಂದಿಗೆ ಸಂಭಾಷಣೆ ನಡೆಸಿರುವುದು ಮಾಜಿ ಸಚಿವ ಬಿ ಶಿವರಾಂ ಎನ್ನಲಾಗಿದೆ. ಬೇಲೂರು ಕನಾಯಕನ ಹಳ್ಳಿಯ ಸ್ಮಶಾನಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವರಾಂ, ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನದಿಂದ ಮಾತನಾಡಿದ್ದಾರೆ. ಆಯಮ್ಮನ ವರ್ಗಾವಣೆಯವರೆಗೆ ನಿನ್ನ ವಿಚಾರ ಹೋಗಿದೆ ನೋಡು ಎಂದು ಹೇಳುವ ಶಿವರಾಂ ಅವರ ಆಡಿಯೋ ಕ್ಲಿಪ್ ನಿಂದಾಗಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಇನ್ನೊಂದು ಕಾರಣ ಸಿಕ್ಕಂತಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್
Advertisement
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ ಶಿವರಾಮ್ ಅವರು, ನಾವು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ, ಧ್ವನಿ ಇಲ್ಲದವರಿಗೆ ಧ್ವನಿ ಕೊಡಬೇಕಾದಂತವರು. ಈ ರೀತಿಯ ದಲಿತರ ಮೇಲೆ ದೌರ್ಜನ್ಯ ನಡೆದಂತಹ ಘಟನೆಗಳಾದಾಗ ಸರ್ಕಾರದ ಮೇಲೆ ಯಾವ ಪರಿಣಾಮ ಬೀರುತ್ತೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ ಅಂದ್ರು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ
Advertisement
ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಅಂತ ನಾನು ಅಲ್ಲಿ ಪ್ರಸ್ತಾಪ ಮಾಡಿಲ್ಲ. ಜಿಲ್ಲೆಯಲ್ಲಿಯ ಸಮಸ್ಯೆಗಳನ್ನು ತೆಗೆದುಕೊಂಡಾಗ ಇಟ್ ಈಸ್ ಎ ಮ್ಯಾಟರ್ ಆಫ್ ಸೆನ್ಸಿಟೀವ್. ಆ ಸಮಸ್ಯೆಗಳು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ರಾಜಕಾರಣಿಗಳು ಯೋಚನೆ ಮಾಡಬೇಕಾಗುತ್ತದೆ ಅಂದ್ರು. ಇದನ್ನೂ ಓದಿ: ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ
Advertisement
ಇದಕ್ಕೆಲ್ಲಾ ವರ್ಗಾವಣೆಯೇ ದಾರಿ ಅಂತ ಹೇಳುತ್ತಿಲ್ಲ. ತಿದ್ದಿಕೊಳ್ಳಬೇಕಾದುದು ಅನಿವಾರ್ಯ. ಮುಖ್ಯಮಂತ್ರಿಗಳು ತಿದ್ದಿಕೊಂಡು ಹೋಗಬೇಕು ಅಂತಾ ಹೇಳಿರ್ತಾರೆ. ಅದನ್ನು ನೋಡಿಕೊಂಡು ಅವರು ಮುಂದಿನ ಹೆಜ್ಜೆ ಇಟ್ಟಿರ್ತಾರೆ. ಇದು ಆಡಳಿತಾತ್ಮಕವಾದ ವಿಚಾರ. ಆದ್ರೆ ಸಮಸ್ಯೆ ಇತ್ತಲ್ಲ. ಅದು ಒಂದೇ ಅಲ್ಲ. ಅದರ ಜೊತೆಗೆ ಚೆನ್ನಪಟ್ಟಣದಲ್ಲಿ ನಡೆದಂತಹ ಜಗಜೀವನ್ ರಾವ್ ಸಂಘದವರ ನಿವೇಶನದ ಬೇಡಿಕೆಗೆ ಇವರು ಅವರ ಜೊತೆ ಯಾವ ರೀತಿಯಾಗಿ ನಡೆದುಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ
ಅಧಿಕಾರಿಗಳು ಜನರ ಜೊತೆ ಯಾವ ರೀತಿ ಇರಬೇಕು? ಯಾವುದಕ್ಕೆ ಸ್ಪಂದಿಸಬೇಕು? ಸಾಮಾಜಿಕ ನ್ಯಾಯ ಕಾಪಾಡಬೇಕು. ನಾನಾ ಸಮಸ್ಯೆಗಳು ಇಂದು ಜಿಲ್ಲೆಯಲ್ಲಿವೆ. ಜಮೀನುಗಳ ಮಂಜೂರಾತಿ ಆಗಿಲ್ಲ. ಒಂದು ದಿನ ಜನತಾ ದರ್ಶನ ಮಾಡಲ್ಲ. ಅವರ ಪ್ರಮುಖವಾದ ಗೇಟಿಗೆ ಬೀಗ ಹಾಕಿರ್ತಾರೆ. ಜನರನ್ನು ನೇರವಾಗಿ ಮಾತನಾಡಿಸಿ ಅವರಿಗೆ ಸ್ಪಂದಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ ಅಂತ ಆರೋಪಿಸಿದ್ರು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಸಿಎಂಗೆ ದೂರು ಹೇಳಿದ ಕಾಂಗ್ರೆಸ್ ನಾಯಕರು
https://www.youtube.com/watch?v=X0-j4yrhca0&feature=youtu.be