ಹಾಸನ: ಇತ್ತೀಚೆಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವೊಂದು ಇದೀಗ ಟ್ವಿಸ್ಟ್ ಪಡೆದುಕೊಂಡಿದ್ದು, ಪತಿಯೇ ಕೊಲೆಮಾಡಿರುವ ವಿಚಾರ ಹೊರಬಿದ್ದಿದೆ.
ಜಿಲ್ಲೆಯ ಚನ್ನರಾಯಪಟ್ಟಣ ಗುಂಡಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ 12ರಂದು ನೇಣು ಬಿಗಿದ ಪರಿಸ್ಥಿತಿಯಲ್ಲಿ ಸುಷ್ಮಾ ಅವರ ಶವ ಪತ್ತೆಯಾಗಿತ್ತು.
- Advertisement 2-
- Advertisement 3-
ತನಿಖೆಯಲ್ಲಿ ಸುಷ್ಮಾರಿಗೆ ಇನ್ನೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಇದ್ರಿಂದ ಸುಷ್ಮಾ ಪತಿ ಮತ್ತು ಆತನ ಸಹೋದರ ಮಹೇಶ ಇಬ್ಬರೂ ಸೇರಿ ಸುಷ್ಮಾ ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.
- Advertisement 4-
ಇದೀಗ ಕೊಲೆ ಮಾಡಿರುವ ತಪ್ಪು ಒಪ್ಪಿಕೊಂಡಿದ್ದು ಇಬ್ಬರನ್ನ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಸದ್ಯ ಮೂರನೇ ವ್ಯಕ್ತಿ ನರೇಶ್ ಮುಂಬೈ ಮೂಲದವನಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.