ಚಿಕ್ಕಬಳ್ಳಾಪುರ: ಪ್ರೀತಿ, ಪ್ರೇಮ, ಪ್ರಣಯ ಎಂದು ಯುವತಿ ಜೊತೆ ಹಾಸಿಗೆ ಹಂಚಿಕೊಂಡ ಯುವಕನೋರ್ವ ಕೊನೆಗೆ ಯುವತಿ ಮದುವೆಯಾಗು ಅಂತ ಒತ್ತಾಯಿಸಿದ್ದಕ್ಕೆ, ಪ್ರಿಯತಮೆಯ ಮೃತದೇಹವೇ ಸಿಗದ ಹಾಗೆ ಕೊಲೆ ಮಾಡಿರುವ ಭಯಂಕರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಾತು ಬಾರದ, ಕಿವಿ ಕೇಳದ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಪ್ಲಾನ್ ಮಾಡಿ ಮರ್ಡರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಗೌರಿಬಿದನೂರು ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿದ್ದ, ಗೌರಿಬಿದನೂರು ನಗರದ ಮುನೇಶ್ವರ ಬಡಾವಣೆಯ ನಿವಾಸಿ ಕಿಶೋರ್ ಎಂಬಾತ ತನ್ನ ಪ್ರಿಯತಮೆ ಕೋಡಿಗಾನಹಳ್ಳಿ ಗ್ರಾಮದ ಅನಿತಾ (22)ಳನ್ನು ಕೊಲೆ ಮಾಡಿದ್ದಾನೆ.
Advertisement
Advertisement
ಗಾರ್ಮೆಂಟ್ಸ್ ನಲ್ಲೇ ಕೆಲಸ ಮಾಡುತ್ತಿದ್ದ ಅನಿತಾಳ ಜೊತೆ ಲವ್ವಿ ಡವ್ವಿ ಶುರು ಇಟ್ಟುಕೊಂಡಿದ್ದ ಕಿಶೋರ್ ದೈಹಿಕವಾಗಿ ಆಕೆಯನ್ನೇ ಬಳಸಿಕೊಂಡಿದ್ದಾನೆ. ಕೊನಗೆ ಆಕೆ ಮದುವೆಯಾಗು ಅಂದಾಗ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಅಂತ ಕ್ಯಾತೆ ತೆಗೆದಿದ್ದಾನೆ.
Advertisement
Advertisement
ಇದೆಲ್ಲದರ ನಡುವೆ ಆನಿತಾ ಹಣಕ್ಕಾಗಿ ಕಿಶೋರ್ ಬಳಿ ಪೀಡಿಸುತ್ತಿದ್ದಳಂತೆ. ಇದರಿಂದ ರೋಸಿ ಹೋದ ಕಿಶೋರ್ ಹಣ ಕೊಡುತ್ತೀನಿ ಬಾ ಅಂತ ಮಾರ್ಚ್ 4ರಂದು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಗೌರಿಬಿದನೂರು ತಾಲೂಕಿನ ನಿರ್ಜನ ಪ್ರದೇಶದವಾದ ದೊಡ್ಡಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ಗುಂಡಿಗೆ ತಳ್ಳಿ, ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊನೆಗೆ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿಬಂದಿದ್ದ.
ಈ ಸಂಬಂಧ ಕೆಲಸಕ್ಕೆ ಹೋದ ಮಗಳು ಬಂದಿಲ್ಲ ಎಂದು ಅನಿತಾಳ ಸಂಬಂಧಿಕರು ಮಾರ್ಚ್ 10 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಇದೆಲ್ಲದರ ನಡುವೆ ಮಾರ್ಚ್ 30 ರಂದು ದೊಡ್ಡಹನುಮೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆ ಬುರುಡೆ, ಮೂಳೆಗಳು ಹಾಗೂ ಅದರ ಜೊತೆಗೆ ಅಲ್ಲೆ ಸಿಕ್ಕ ಬ್ಯಾಗ್ ನಿಂದ ಅನಿತಾ ಕೊಲೆಯಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅನಿತಾಳ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರು. ಅನಿತಾಳ ಮೊಬೈಲ್ ನಲ್ಲಿದ್ದ ಫೋಟೋಗಳು ಹಾಗೂ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿ, ಕಿಶೋರ್ ನನ್ನ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಈ ಸಂಬಂಧ ಆರೋಪಿ ಕಿಶೋರ್ ನನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ, ಮೂಳೆಗಳು ಪತ್ತೆ!