ಕಲಬುರಗಿ: ಕೈ ಮುಖಂಡ ರಾಜು ಕಪನೂರ ಟೆಂಡರ್‌ಗಾಗಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವುದಾಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ (Sachin Panchal Case) ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಆರೋಪಿ ರಾಜು ಕಪನೂರ್ ಸಹೋದರ ಪ್ರಕಾಶ್ ಕಪನೂರ್ ಕೆಲವು ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ.
Advertisement
ಸಚಿನ್ RWSSDಯಲ್ಲಿ 12 ಕೋಟಿ ರೂ. ಟೆಂಡರ್ ಪಡೆಯಲು ಇಎಂಡಿ ಹಣ ಕಟ್ಟುವುದಕ್ಕೆ ಕೈ ಮುಖಂಡ (Congress Leader) ಆರೋಪಿ ಸ್ಥಾನದಲ್ಲಿರುವ ರಾಜು ಕಪನೂರ್ ಅವರ ಸ್ನೇಹಿತರಾದ ಮನೋಜ್, ಪ್ರತಾಪ್ ಧೀರ್ ಕಡೆಯಿಂದ ಬ್ಯಾಂಕ್ ಮೂಲಕ 58.77 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದ. ಇದಕ್ಕೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು (Bank Documents) ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿರುವ ಪ್ರಕಾಶ್ ಕಪನೂರ್ ಬಿಡುಗಡೆ ಮಾಡಿದ್ದಾರೆ. ನಮ್ಮ ಸಹೋದರ ಆತನಿಂದ ಹಣ ಪಡೆದಿಲ್ಲ ಖುದ್ದು ಮೃತ ಸಚಿನ್ ಟೆಂಡರ್ ಆಸೆ ತೋರಿಸಿ ನಮ್ಮ ಸಹೋದರನ ಸ್ನೇಹಿತನಿಂದ 60 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿದ್ದಾರೆ.
Advertisement
Advertisement
ಇನ್ನೂ ಸಚಿನ್ ಆತ್ಮಹತ್ಯೆ ಸುತ್ತ ಹಲವು ಅನುಮಾನ ವ್ಯಕ್ತಪಡಿಸಿರುವ ಪ್ರಕಾಶ್ ಕಪನೂರ್, ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಫೋಟೋ ತೆಗೆದಿದ್ದು, ಆ ಫೋಟೋದಲ್ಲಿ ಮೂರು ಹೆಬ್ಬೆರಳ ಗುರುತುಗಳು ಕಂಡುಬಂದಿವೆ. ಈ ಮೂಲಕ ಸಚಿನ್ ಜೊತೆಗೆ ಆ ಡೆತ್ ಬರೆಯುವಾಗ ಹಾಗೂ ಫೋಟೋ ತೆಗೆಯುವಾಗ ಇನ್ನೂ ಕೆಲವರು ಆತನ ಜೊತೆ ಇರುವುದು ಸಹ ಸ್ಪಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್
Advertisement
ನಮ್ಮ ಸಹೋದರನ ಹೆಸರು ಕೆಡಿಸಲು ಸಚಿನ್‌ರನ್ನ ಕೆಲವರು ಬಳಕ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನ ಉನ್ನತಮಟ್ಟದಲ್ಲಿ ತನಿಖೆ ಮಾಡಿಸಿದ್ರೆ ಸಚಿನ್ ಆತ್ಮಹತ್ಯೆ ಹಾಗೂ ಡೆತ್‌ನೋಟ್ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆಗ್ರಹಿಸಿದ್ದಾರೆ. ಈ ಮಧ್ಯ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ಗೃಹ ಸಚಿವ ಜಿ.ಪರಮೇಶ್ವರ ತನಿಖೆಗೆ ಒಪ್ಪಿಸಿದ್ದಾರೆ.
ಸದ್ಯ ತನಿಖೆ ನಡೆಸುತ್ತಿರುವ ರೈಲ್ವೆ ಎಸ್ಪಿ ಸೌಮ್ಯಲತಾ ಎರಡು ದಿನಗಳ ತನಿಖೆ ನಡೆಸಿ ಹಲವು ಕಡತಗಳ ಸಮೇತ ಹಿರಿಯ ಅಧಿಕಾರಿಗಳಿಗೆ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಸದ್ಯ ಪ್ರಕಾಶ್ ಕಪನೂರ್ ನೀಡಿದ ಬ್ಯಾಂಕ್ ದಾಖಲೆಗಳು ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಐಡಿ ತನಿಖೆಯಿಂದಲೇ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಉತ್ತರ ಸಿಗಲ್ಲಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕಲಬುರಗಿಯ ನಿಜಾಮ ಅಲ್ಲ, ಅನುಯಾಯಿಗಳು ರಜಾಕರಲ್ಲ, ರಾಜೀನಾಮೆ ಕೊಡಲಿ: ಅಶೋಕ್