ಉಡುಪಿ: ಮಣಿಪಾಲದಲ್ಲಿ (Manipal) ಬಾಣಸಿಗ (Chef) ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಯರ್ ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಪೊಲೀಸರು (Manipal Police) ಶಂಕೆ ವ್ಯಕ್ತಪಡಿಸಿದ್ದಾರೆ.
ಕೇರಳದ (Kerala) ಕಾಸರಗೋಡು ಮೂಲದ ಬಾಣಸಿಗ ಶ್ರೀಧರ್ ಮೃತದೇಹ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಕುತ್ತಿಗೆಗೆ ಬಾಟಲಿಯಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. ಇದೀಗ ಸಿಸಿ ಕ್ಯಾಮೆರಾ ಪರಿಶೀಲನೆಯ ಬಳಿಕ ಪೊಲೀಸರ ಅಭಿಪ್ರಾಯ ಬದಲಾಗಿದೆ. ಮೃತ ವ್ಯಕ್ತಿಯ ಸಂಪೂರ್ಣ ಚಲನವಲನ ಗಮನಿಸಿದ ಪೊಲೀಸರು ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ
ಮೃತ ವ್ಯಕ್ತಿಯ ಬಳಿ ಯಾರು ಹಾದು ಹೋಗಿಲ್ಲ, ಹಲ್ಲೆ ಕೂಡ ಮಾಡಿಲ್ಲ. ಈ ಹಿನ್ನೆಲೆ ತಾನೇ ಬಿಯರ್ ಬಾಟಲಿಯಿಂದ ಇರಿದುಕೊಂಡು ಸತ್ತಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಘಟನೆಯ ಬಗ್ಗೆ ಸ್ಪಷ್ಟತೆ ದೊರಕಲಿದೆ. ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ಘಟನೆ ನಡೆದಿತ್ತು. ಮೃತ ಶ್ರೀಧರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ಉಪಸಮಿತಿ ನಿರ್ಧಾರ
ಶ್ರೀಧರ್ ವಿಪರೀತ ಮದ್ಯವ್ಯಸನಿಯಾಗಿದ್ದ. ಈತ ಮಣಿಪಾಲದ ಹೋಟೆಲ್‌ವೊಂದರಲ್ಲಿ ಬಾಣಸಿಗನಾಗಿದ್ದ. ಈತನ ಆತ್ಮಹತ್ಯೆಗೆ ನಿಖರ ಕಾರಣವೂ ತಿಳಿದುಬಂದಿಲ್ಲ. ಸದ್ಯ ಶ್ರೀಧರ್ ಕುಟುಂಬಸ್ಥರು ಕೇರಳದಿಂದ ಮಣಿಪಾಲಕ್ಕೆ ಆಗಮಿಸಿದ್ದು, ಕುಟುಂಬಸ್ಥರ ಬಳಿ ಮಣಿಪಾಲ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಉಡುಪಿ| ಹೋಟೆಲ್ ಬಾಣಸಿಗ ಭೀಕರ ಹತ್ಯೆ – ಬಿಯರ್ ಬಾಟಲಿ ಗಾಜಿನಿಂದ ಕತ್ತು ಸೀಳಿ ಕೊಲೆ