ಬೆಂಗಳೂರು: ಕೋರಮಂಗಲ ಲೇಡಿಸ್ ಪಿಜಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ (Koramangala PG Case) ಪೊಲೀಸ್ ತನಿಖೆ ವೇಳೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೃತಿ ಕುಮಾರಿಯನ್ನ ಎಂಬ ಯುವತಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿ ಸ್ನೇಹಿತೆಯ ಪ್ರಿಯಕರ (Lover) ಅನ್ನೋದು ಬೆಳಕಿಗೆ ಬಂದಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ ಅನ್ನೋದು ಮಾತ್ರ ಇನ್ನು ನಿಗೂಢವಾಗಿದೆ.
Advertisement
ಮಂಗಳವಾರ ತಡರಾತ್ರಿ ಕೋರಮಂಗಲ ಪಿಜಿಯಲ್ಲಿ ನಡೆದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಸ್ಪೋಟಕ ತಿರುವು ಸಿಕ್ಕಿದೆ. ಕೃತಿ ಕುಮಾರಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿಯ ರೂಮ್‌ಮೇಟ್ ಕಂ ಸಹೋದ್ಯೋಗಿಯ ಪ್ರಿಯಕರ ಅಭಿಷೇಕ್ ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಭೂಪಾಲ್ ಮೂಲದ ಅಭಿಷೇಕ್ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಇತ್ತ ಬೆಂಗಳೂರಿಗೆ ಕೆಲಸ ಅರಿಸಿ ಅಭಿಷೇಕ್ ಪ್ರಿಯತಮೆ ಕೃತಿ ಕುಮಾರಿ ಕೆಲಸ ಮಾಡ್ತಿದ್ದ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದು, ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ
Advertisement
Advertisement
ಭೂಪಾಲ್ ನಲ್ಲಿ ಯಾವುದೇ ಕೆಲಸ ಕಾರ್ಯವಿಲ್ಲದೇ ಇದ್ದ ಅಭಿಷೇಕ್ ಆಗಾಗ್ಗೆ ಬೆಂಗಳೂರಿಗೆ ಬರೋದು, ಪ್ರೇಯಸಿಯೊಂದಿಗೆ ಕೆಲ ಸಮಯ ಸುತ್ತಾಡಿಕೊಂಡು ಹೋಗ್ತಿದ್ದನಂತೆ. ಆದ್ರೆ ಕೆಲಸ ಇಲ್ಲದೇ ಓಡಾಡ್ತಿದ್ದರಿಂದ ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಜಗಳ ನಡೆಯುತ್ತಿದ್ದು, ಪ್ರೀತಿಯಲ್ಲಿ ಬಿರುಕು ಮೂಡಿತ್ತಂತೆ. ಇದರ ಮಧ್ಯೆ ಕೆಲಸಕ್ಕೆ ಸೇರಿಕೊ ಅಂತ ಅಭಿಷೇಕ್ ಪ್ರೇಯಸಿ ಹೇಳಿದ್ದು, ಕೆಲಸಕ್ಕೆ ಸೇರಿಕೊಂಡಿರುವುದಾಗಿ ಸುಳ್ಳು ಹೇಳಿದ್ದನಂತೆ. ಅಭಿಷೇಕ್ ಸುಳ್ಳು ಹೇಳ್ತಿದ್ದಾನೆ ಅನ್ನೋದು ತಿಳಿದ ನಂತರ ಪ್ರೇಯಸಿ ಜೋರಾಗಿಯೇ ಗಲಾಟೆ ಮಾಡಿದ್ದಾಳೆ. ನಂತರ ಅಭಿಷೇಕ್‌ನನ್ನ ಅವಾಯ್ಡ್ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?
Advertisement
ಯಾವಾಗ ಆಭಿಷೇಕ್‌ನನ್ನ ಅವಾಯ್ಡ್ ಮಾಡೋದಕ್ಕೆ ಪ್ರೇಯಸಿ ಆರಂಭಿಸಿದ್ಲೋ ಅಭಿಷೇಕ್ ಆಗಾಗ್ಗೆ ಪಿಜಿ ಬಳಿ ಬಂದ ಗಲಾಟೆ ಮಾಡಿದ್ದ. ಹೀಗಾಗಿ ಕೆಲವು ದಿನಗಳಿಂದೆ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳಂತೆ. ಪಿಜಿ ಬದಲಾಯಿಸಿದ್ದೆ ಅಭಿಷೇಕ್ ಫೋನ್ ಮಾಡಿದ್ರೆ ಆತನ ಪ್ರೇಯಸಿ ಫೋನ್ ಕಟ್ಮಾಡೋದು ಮಾಡ್ತಿದ್ದು, ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಅಭಿಷೇಕ್ ನೇರವಾಗಿ ಪಿಜಿ ಬಳಿ ಬಂದಿದ್ದಾನೆ. ಆ ವೇಳೆ ಸೆಕ್ಯುರಿಟಿ ತಡೆದಿದ್ದಾರೆ. ಬಳಿಕ ಮದ್ಯರಾತ್ರಿ ಮತ್ತೆ ಬಂದ ಅಭಿಷೇಕ್ ನೇರವಾಗಿ 3ನೇ ಪ್ಲೋರ್‌ಗೆ ತೆರಳಿ ರೂಮ್‌ನ ಬಾಗಿಲು ತೆರೆಯುತ್ತಿದಂತೆ ಕೃತಿ ಕುಮಾರಿಯ ಕತ್ತು ಕೊಯ್ತು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಕೃತಿ ಕುಮಾರಿ ಬಾಗಿಲು ತೆರೆಯುತ್ತಿದ್ದಂತೆ ಕತ್ತು ಕೊಯ್ದಿರೋದನ್ನ ಗಮನಿಸಿದಾಗ ಆತನ ಪ್ರೇಯಸಿಯನ್ನೇ ಕೊಲೆ ಮಾಡಲು ಬಂದಿದ್ದ ಅನ್ನೋ ಅನುಮಾನಗಳು ಬರುತ್ತಿವೆ ಎಂದು ಹೇಳಲಾಗಿದೆ. ಸದ್ಯ ಆರೋಪಿಯ ಸುಳಿವು ಪತ್ತೆ ಹಚ್ಚಿರುವ ಕೋರಮಂಗಲ ಪೊಲೀಸರು ಅಭಿಷೇಕ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ