ಬೆಂಗಳೂರು: ಕೆ.ಆರ್ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪ್ ಪ್ರಕರಣದ (Kidnap Case) ಸಂತ್ರಸ್ತೆಯ ಹೇಳಿಕೆ ವಿಡಿಯೋ ವೈರಲ್ ಆಗಿದೆ.
ನಾಪತ್ತೆಯಾಗಿದ್ದ ಸಂತ್ರಸ್ತೆಯ (Victim Video) ಹೇಳಿಕೆಯ ವಿಡಿಯೋ ಏಕಾಏಕಿ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಸಂತ್ರಸ್ತೆ, ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ನನ್ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ. ನಾನೇ ಸಂಬಂಧಿಕರ ಮನೆಗೆ ಹೋಗಿದ್ದೆ. ನನ್ನ ಮಗ ಏನೂ ಗೊತ್ತಿಲ್ಲದಂತೆ ದೂರು ಕೊಟ್ಟಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ: ಪೆನ್‍ಡ್ರೈವ್ ಕೇಸ್: ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ – ಎ.ಮಂಜು
ಸಂತ್ರಸ್ತೆ ವೀಡಿಯೋದಲ್ಲಿ ಹೇಳಿದ್ದೇನು?
ಊರಲ್ಲೆಲ್ಲಾ ಹಿಂಗೆ ಮಾತಾಡ್ತಿದ್ದಕ್ಕೆ ಬೇಜಾರಾಗಿ ಸಂಬಂಧಿಕರ ಮನೆಯಲ್ಲಿ ನಾಲ್ಕು ದಿವಸ ಕಾಲ ಕಳೆದುಕೊಂಡು ಬರೋಣ ಅಂತಾ ಹೋದೆ. ಆದ್ರೆ ಇವತ್ತು ಟಿವಿ ನೋಡಬೇಕಾದ್ರೆ ಗೊತ್ತಾಯ್ತು. ಈ ತರ ಎಲ್ಲಾ ಮಾಡ್ತಿದ್ದಾರೆ ಅಂತ. ಅದನ್ನ ನೋಡಿ ಯಾಕಪ್ಪ ಹೀಗೆಲ್ಲಾ ಮಾಡಿದ್ರು ಅಂತ ಯೋಚನೆ ಬಂತು. ಆದ್ರೆ ಯಾವ ತೊಂದ್ರೆನೂ ಈಗ ಇಲ್ವಲ್ಲ. ಯಾಕ್ ಹೀಗೆ ಮಾಡ್ತಿದ್ದಾರೆ. ಅಂತ ನಾನೇ ವಿಡಿಯೋ ಮಾಡಿಸಿದೆ.
ನಮಗೆ ಯಾವುದೇ ರೀತಿ ತೊಂದರೆ ಇಲ್ಲ. ಭವಾನಿ ಅಕ್ಕ, ರೇವಣ್ಣ ಆಗ್ಲಿ, ಪ್ರಜ್ಜು ಅಣ್ಣ ಆಗ್ಲಿ ಅವರಿಂದ ನಮಗೇನೂ ತೊಂದ್ರೆ ಇಲ್ಲ. ನಮ್ಮಿಂದ ಅವರಿಗೂ ತೊಂದ್ರೆ ಇಲ್ಲ. ಬಾಬಣ್ಣ ಇರಲಿ, ಯಾರೂ ಏನೂ ತೊಂದ್ರೆ ಮಾಡಿಲ್ಲ. ಆದ್ರೆ ಚೆನ್ನಾಗಿ ನೋಡ್ಕಂಡೆ ಕಳುಹಿಸಿದ್ದಾರೆ. ಈ ಮೊಬೈಲ್ ವೀಡಿಯೋಗೆ ನಮಗೆ ಸಂಬಂಧವೇ ಇಲ್ಲ. ನನ್ನನ್ನ ಯಾರೂ ಅಪಹರಿಸಿಯೂ ಇಲ್ಲ ಎಂದು ಹೇಳಿದ್ದಾರೆ.
ನನ್ನ ಮಗನಾದ್ರೂ ಅಷ್ಟೇ ಏನೂ ಭಯ ಪಡಬೇಡ, ಚೆನ್ನಾಗಿ ಇದ್ದಿನಿ. ಬರ್ತಿನಿ ಎರಡು ದಿವಸದೊಳಗೆ. ಏನೂ ತೊಂದ್ರೆ ಆಗೋದಿಲ್ಲ ಚೆನ್ನಾಗಿದ್ದೀನಿ. ಯಾರೇ ಏನೇ ಅಂದರೂ ತಲೆಗೆ ಹಾಕಿಕೊಳ್ಳಬೇಡ ಎಂದು ಪುತ್ರನಿಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ
ನಾವೂ ಕೂಲಿ ಮಾಡಿಕೊಂಡು ಜೀವನ ಸಾಗಿಸೋರು. ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ನೆಮ್ಮದಿಯಿಂದ ಕೂಲಿ ಮಾಡಿಕೊಂಡು ಇದೀವಿ ಬಿಟ್ಟುಬಿಡಿ. ನಮ್ಮ ಗಂಡನಿಗೆ ಯಾರಿಗೆ, ಏನೇ ಆದ್ರೂ ನೀವೇ ಹೊಣೆ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.