ಮಡಿಕೇರಿ: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ನಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಇದನ್ನು ವಿನಯ್ ಸೋಮಯ್ಯ, ಬಾಮೈದ ಸುಶಾಂತ್ ಎಂಬಾತನಿಗೆ ಕಳಿಸಿಕೊಟ್ಟಿದ್ರು ಎನ್ನಲಾಗಿದೆ. ಆದ್ರೆ, ಇದನ್ನು ನಾಲ್ಕು ದಿನದ ಬಳಿಕ ಏಕೆ ರಿವೀಲ್ ಮಾಡಲಾಯ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಮತ್ತೊಂದ್ಕಡೆ, ಕೊಡಗಿನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳ ಮೂಲಕ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿನಯ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ವಿನಯ್‌ದು ಆತ್ಮಹತ್ಯೆ ಅಲ್ಲ.. ಕೊಲೆ ಎಂದು ಕಮಲಕಲಿಗಳು ಆಪಾದಿಸಿದ್ರು. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್
ಆದ್ರೆ, ಬಿಜೆಪಿಯವರೇ ನಾಟಕ ಮಾಡ್ತಿದ್ದಾರೆ ಎಂದು ಪೊನ್ನಣ್ಣ ಪ್ರತ್ಯಾರೋಪ ಮಾಡಿದ್ರು. ಈ ಲೆಟರ್ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ರು. ಡೆತ್ ನೋಟ್ ಎಲ್ಲಿದೆ.. ಅದು ವಾಟ್ಸಪ್ ಮೆಸೇಜ್ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ರು. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ