ಬೆಂಗಳೂರು: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಉಪಸಮರದ ಕಾವು ಗರಿಗೆದರಿದೆ. ಮೂರು ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಕೊಂಡಿವೆ. ಈ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮೆಗಾ ಟಾಸ್ಕ್ ನೀಡಿದೆ.
ನಿಮ್ಮ ಸರ್ಕಾರ ಇರಬೇಕು ಅಂದರೆ ಟಾಸ್ಕ್ ಮುಗಿಸಿ ಎಂದು ಉಪಚುನಾವಣೆಯಲ್ಲಿ ಬಿಎಸ್‍ವೈಗೆ ಅಮಿತ್ ಶಾ ಟಾರ್ಗೆಟ್ ನೀಡಿದ್ದಾರೆ. ಈ ಮೂಲಕ ಅಮಿತ್ ಶಾ ಮಿನಿಮಮ್ 10 ಮ್ಯಾಕ್ಸಿಮಮ್ 12 ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಅನರ್ಹರಿಗೆ ಅಥವಾ ಅವರ ಕುಟುಂಬದವರಿಗೆ ಟಿಕೆಟ್ ಕೊಡೋಣ. ಈ ಸಂಬಂಧ ಯಾವುದೇ ಅಭ್ಯಂತರ ಇಲ್ಲ. ಆದರೆ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರೋದು ನಿಮ್ಮ ಜವಾಬ್ದಾರಿಯಾಗಿದೆ. ಚುನಾವಣೆಯ ತಂತ್ರಗಾರಿಕೆ, ಫಂಡ್ ಎಲ್ಲವನ್ನೂ ಮ್ಯಾನೇಜ್ ಮಾಡಿಕೊಂಡು ಬಿಡಿ. ನಮಗೆ ಮಹಾರಾಷ್ಟ್ರ, ಹರಿಯಾಣ ಚುನಾವಣೆ ಕೆಲಸ ಇದೆ. ಹೀಗಾಗಿ ಬೈ ಎಲೆಕ್ಷನ್ ಕಂಪ್ಲೀಟ್ ಹೊಣೆ ನಿಮ್ಮದೇ ಆಗಿರುತ್ತದೆ ಎಂದು ಅಮಿತ್ ಶಾ, ಸಿಎಂ ಬಿಎಸ್‍ವೈಗೆ ಸಂದೇಶ ರವಾನಿಸಿದ್ದಾರೆ.
Advertisement
ಇತ್ತ ಬಿಎಸ್‍ವೈಗೆ ರಾಜ್ಯಾಧ್ಯಕ್ಷ ಕಟೀಲ್ ಸಪೋರ್ಟ್ ಕೂಡ ಅಷ್ಟಕ್ಕಷ್ಟೇ ಇದ್ದು, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತೆ ಏಕಾಂಗಿ ಫೈಟರ್ ಆಗಿ ಬಿಟ್ರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಟಾರ್ಗೆಟ್ 12 ರೀಚ್ ಸಂಬಂಧ ಬಿಎಸ್‍ವೈಗೆ ಫುಲ್ ಟೆನ್ಶನ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement