ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೊದಲ ಹಂತ ಚುನಾವಣೆಗೆ 4 ದಿನ ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ (Congrees) ಭಾರಿ ಹಿನ್ನಡೆಯಾಗಿದ್ದು ದೊಡ್ಡ ನಾಯಕರ ಗುಂಪು ಭಾರತೀಯ ಜನತಾ ಪಕ್ಷವನ್ನು (BJP) ಸೇರ್ಪಡೆಗೊಂಡಿದೆ. 26 ನಾಯಕರನ್ನು ಸಿಎಂ ಜೈರಾಮ್ ಠಾಕೂರ್ (Jairam Thakur) ಪಕ್ಷಕ್ಕೆ ಬರ ಮಾಡಿಕೊಂಡರು.
ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್ (Dharampal Thakur), ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮಿತ್ ಮೆಹ್ತಾ, ಮೆಹರ್ ಸಿಂಗ್ ಕನ್ವರ್, ಯುವ ಕಾಂಗ್ರೆಸ್ (Youth Congress) ಅಧ್ಯಕ್ಷ ರಾಹುಲ್ ನೇಗಿ, ಜೈ ಮಾ ಶಕ್ತಿ ಸಮಾಜ ಸಂಸ್ಥಾನದ ಅಧ್ಯಕ್ಷ ಜೋಗಿಂದರ್ ಸೇರಿದ್ದಾರೆ.
ಠಾಕೂರ್, ನರೇಶ್ ವರ್ಮಾ, ಚಮ್ಯಾನ ವಾರ್ಡ್ ಸದಸ್ಯ ಯೋಗೇಂದ್ರ ಸಿಂಗ್, ಟ್ಯಾಕ್ಸಿ ಯೂನಿಯನ್ ಸದಸ್ಯ ರಾಕೇಶ್ ಚೌಹಾಣ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಶಿಮ್ಲಾ ಅಧ್ಯಕ್ಷ ಧರ್ಮೇಂದ್ರ ಕುಮಾರ್, ವೀರೇಂದ್ರ ಶರ್ಮಾ, ರಾಹುಲ್ ರಾವತ್, ಸೋನು ಶರ್ಮಾ, ಅರುಣ್ ಕುಮಾರ್, ಶಿವಂ ಕುಮಾರ್ ಮತ್ತು ಗೋಪಾಲ್ ಠಾಕೂರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಆತ್ಮೀಯ ಸ್ವಾಗತ ಕೋರಿದರು. ಬಿಜೆಪಿಯ ಐತಿಹಾಸಿಕ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.