ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿಗೆ ಬಿಗ್ ಶಾಕ್

Public TV
1 Min Read
K Shadakshari

ತುಮಕೂರು: ತಿಪಟೂರು ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆಯಲು ವೇದಿಕೆ ಸಜ್ಜಾಗ್ತಿದೆ. ಮೂರನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರಿಗೆ ಶಾಕ್ ಕೊಡಲೆಂದು ಅವರ ಎರಡನೇ ಪತ್ನಿ ಎನ್ನಲಾದ ಮಹಿಳೆಯೋರ್ವರು ಸನ್ನದ್ಧರಾಗಿದ್ದಾರೆ.

ಮಧುಕುಮಾರಿ ಕೆ ಎಂಬವರು ಶಾಸಕ ಷಡಕ್ಷರಿ ವಿರುದ್ಧ ಈ ಬಾರಿ ಬಿಜೆಪಿ, ಜೆಡಿಎಸ್ ಗಿಂತ ಪ್ರಬಲ ಸ್ಪರ್ಧೆ ನೀಡಲು ಸಿದ್ಧರಾಗಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

TMK MLA WIFE ELECATION AV 3

ಮಧುಕುಮಾರಿಯನ್ನು ರಹಸ್ಯವಾಗಿ ಷಡಕ್ಷರಿ ಮದುವೆಯಾಗಿ ಈಗ ನನಗೂ ಅವಳಿಗೂ ಸಂಬಂಧ ಇಲ್ಲ ಅನ್ನುತಿದ್ದಾರೆ. ಆದ್ರೆ ಇತ್ತ ಷಡಕ್ಷರಿ ಅವರಿಂದ ತನಗೂ ತನ್ನ ಮಗನಿಗೂ ಆಗಿರುವ ಭಾರೀ ದೊಡ್ಡ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದೇ ಪತ್ನಿ ಮಧು ಸನ್ನದ್ಧವಾಗಿದ್ದಾರೆ. ಇದಕ್ಕಾಗಿ ಅವರು ಇನ್ನೇನು ಕೆಲ ದಿನಗಳಲ್ಲೇ ತಿಪಟೂರಿಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿರೋ ಮಧು ಅವರ ಸ್ಪರ್ಧೆಯಿಂದಾಗಿ ಷಡಕ್ಷರಿಗೆ ತೀವ್ರ ತಲೆನೋವು ಸೃಷ್ಟಿಯಾಗಿದೆ. ಇದರ ಲಾಭ ಸಹಜವಾಗೇ ಷಡಕ್ಷರಿ ಅವರ ರಾಜಕೀಯ ವಿರೋಧಿಗಳಿಗೆ ಆಗಲಿದೆ ಎಂಬುದಾಗಿ ರಾಜಕೀಯವಲಯದಲ್ಲಿ ಚರ್ಚೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *