ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲೆಯಲ್ಲಿ ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯವೆಂದು, ಚುನಾವಣಾ ರಂಗದಿಂದ ಹಿಂದೆ ಸರಿದ ಮಧು ಬಂಗಾರಪ್ಪನವರ ನಡೆಯಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಪ್ರಾರಂಭದಲ್ಲೇ ಶಾಕ್ ಆಗಿದೆ.
ಬಿಎಸ್‍ವೈ ರವರು ಜಿಲ್ಲೆಯಲ್ಲಿ ಪ್ರಬಲ ನಾಯಕರಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯವೆಂದು ಅರಿತ ಮಧು ಬಂಗಾರಪ್ಪನವರು ಲೋಕಸಭಾ ಚುನಾವಣೆಯ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಯುದ್ದಕ್ಕೂ ಮುನ್ನವೇ ಮಧು ಬಂಗಾರಪ್ಪ ಶಸ್ತ್ರತ್ಯಾಗ ಮಾಡಿದ್ದರಿಂದ ಲೋಕಸಭಾ ಚುನಾವಣೆಗೆ ಜೆಡಿಎಸ್ ಗೆ ಪ್ರಾರಂಭದಲ್ಲೇ ವಿಘ್ನ ಕಾಣಿಸಿಕೊಂಡಿದೆ.
ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ನಲ್ಲಿ ಭಾರೀ ಕಸರತ್ತು ನಡೆಯುತ್ತಿದ್ದು, ಸಿಎಂ ಕುಮಾರಸ್ವಾಮಿಯವರು ಜಿಲ್ಲೆಯಲ್ಲಿ ಬಿಎಸ್‍ವೈ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಗಾಗಿ ಭಾರೀ ಸರ್ಕಸ್ ನಡೆಸುತ್ತಿದ್ದಾರೆ. ಅಲ್ಲದೇ ಶಿವಮೊಗ್ಗ ಕ್ಷೇತ್ರದಿಂದ ಮಧು ಬಂಗಾರಪ್ಪನವರನ್ನು ಅಖಾಡಕ್ಕಿಳಿಸಲು ಮುಂದಾಗಿದ್ದ ಸಿಎಂಗೆ ಆರಂಭದಲ್ಲೇ ಶಾಕ್ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ನಟ ಶಿವರಾಜಕುಮಾರ್ ರವರ ಧರ್ಮಪತ್ನಿ ಗೀತಾ ಶಿವರಾಜ್‍ಕುಮಾರ್ ರವರಿಗೆ ಆಫರ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಗೀತಾರವರೂ ಸಹ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎನ್ನುವ ಗುಮಾನಿಗಳು ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews