ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಲು ಸರ್ಕಾರ ಅಸ್ತು ಎಂದಿದೆ.
ದರ್ಶನ್ ಜಾಮೀನು ರದ್ದಿಗೆ ಮೇಲ್ಮನವಿಗೆ ಸರ್ಕಾರ (Karnataka Government) ಗ್ರೀನ್ ಸಿಗ್ನಲ್ ನೀಡಿದೆ. ಮೇಲ್ಮನವಿ ಸಲ್ಲಿಕೆಗೆ ಗೃಹ ಇಲಾಖೆ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಆದೇಶ ಸಿಕ್ಕಿದೆ.
- Advertisement -
- Advertisement -
ಬೆಂಗಳೂರು ಪೊಲೀಸರ (Bengalruu Police) ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಅನಿಲ್ ಸಿ ನಿಶಾನಿ ಹಾಗೂ ಹಿರಿಯ ವಕೀಲ ಸಿದ್ದಾರ್ಥ್ ಲುಥಾರ ಅವರನ್ನು ನೇಮಕ ಮಾಡಲಾಗಿದೆ.
- Advertisement -
ರಾಜ್ಯ ಸರ್ಕಾರ ಅಸ್ತು ಹಿನ್ನಲೆ ಎರಡ್ಮೂರು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ (SLP) ಸಲ್ಲಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್ ಎಚ್ಚರಿಕೆ
- Advertisement -
ಪವಿತ್ರಗೌಡ, ದರ್ಶನ್ ಸೇರಿದಂತೆ ಎಲ್ಲಾ 7 ಜನ ಆರೋಪಿಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಬೆಂಗಳೂರು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.