Connect with us

Bengaluru City

ಸರ್ಕಾರ ಕೆಡವಿ ನಮ್ಮ ದಾರಿ ನೋಡಿಕೋಳ್ಳುತ್ತೇವೆ ಅನ್ತಿದ್ದವರಿಗೆ ಬಿಗ್ ಶಾಕ್

Published

on

-ಆಪರೇಷನ್ ‘310’ ನಡೆಯುತ್ತಿರೋದು ಯಾಕೆ..?
-ಯಾರ ವಿರುದ್ಧ ಆಪರೇಷನ್ ‘310’

ಬೆಂಗಳೂರು: ವಿಧಾನಮಂಡಲ ಅಧಿವೇಶನದ ವೇಳೆಯಲ್ಲೇ ಜಾರಕಿಹೋಳಿ ಸಹೋದರರ ವಿರುದ್ಧ ಸೀಕ್ರೆಟ್ ಆಪರೇಷನ್ `310′ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆಪರೇಷನ್ ಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ಮೂಲಕ ಸರ್ಕಾರ ಕೆಡವಿ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ.

ಸಚಿವ ರಮೇಶ್, ಮಾಜಿ ಸಚಿವರಾದ ಸತೀಶ್, ಬಾಲಚಂದ್ರ ಜಾರಕಿಹೋಳಿ ಇಲ್ಲಿ ಟಾರ್ಗೇಟ್ ಆಗಿದ್ದಾರೆ. ಟ್ರಿಪ್ ಹೋಗುವ ಮುನ್ನ ಆ ಮೂವರು ಮೇಲೆ ಎಲ್ಲಿ ಹೋಗ್ತಾರೆ..? ಎಲ್ಲಿ ಬರ್ತಾರೆ..? ಯಾರ ಜೊತೆ ಮಾತಾಡ್ತಾರೆ..? ಎಲ್ಲಿ ಸೇರ್ತಾರೆ..? ಕಣ್ಣಿಡಿ ಎಂದು ಸಿಎಂ, ಡಿಸಿಎಂಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಸಿಎಂ ಸೂಚನೆಯಂತೆ ಗುಪ್ತಚರ ಇಲಾಖೆಯಿಂದ ಆಪರೇಷನ್ `310′ ಶುರುವಾಗಿದೆ. ನಿಗಾ ಇಡಲೆಂದೇ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಂಕಮ್ ಹೋಟೆಲ್‍ನಲ್ಲಿ 310ನೇ ಕೊಠಡಿ ನೀಡಲಾಗಿದ್ದು, ಈ ಹೋಟೆಲ್ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ರೂಂ ಬಳಿ ಸುಳಿದಾಡುತ್ತಿರುವ, ತಪಾಸಣೆ ಮಾಡಿದ ಎಕ್ಸ್ ಕ್ಲೂಸಿವ್ ದೃಶ್ಯ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಆಪರೇಷನ್ `310′ ಸುಳಿವು ಸಿಗುತ್ತಲೇ ಬೆಳಗಾವಿ ಸಾಹುಕಾರ ಫುಲ್ ಅಲರ್ಟ್ ಆಗಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕಾರ್, ಎಸ್ಕಾರ್ಟ್, ಪೈಲೆಟ್ ಎಲ್ಲಾ ಬಿಟ್ಟು ಓಡಾಡುತ್ತಿದ್ದಾರೆ. ನಡೆದಿದ್ದೇ ಹಾದಿ ಎನ್ನುವ ಬ್ರದರ್ಸ್ ಗೆ ಈಗ ತಮ್ಮ ನೆಲದಲ್ಲೆ `ಕದ್ದುಮುಚ್ಚಿ’ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಆಪರೇಷನ್ ಕಮಲದ ಭೀತಿ, ರೆಸಾರ್ಟ್ ರಾಜಕಾರಣದ ಆತಂಕದಿಂದ ಆಪರೇಷನ್ `310′ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಸಿದ್ದು-ಸ್ವಾಮಿ-ಪರಮ ರಹಸ್ಯದ ಸ್ಕೆಚ್‍ಗೆ ಜಾರಕಿಹೊಳಿ ಬ್ರದರ್ಸ್ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *