ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಅವರ ಎನ್ ಕನ್ವೆನ್ಷನ್ ಹಾಲ್ (N Convention Hall) ಅನ್ನು ನೆಲಸಮಗೊಳಿಸಲಾಗಿದೆ.
ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (HYDRA)(ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ಸಂಸ್ಥೆ ಶನಿವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಹೈದ್ರಾಬಾದ್‌ನ ಮಾದಾಪುರದಲ್ಲಿರುವ (Madhapur) ಎನ್ ಕನ್ವೆನ್ಷನ್ ಆಸ್ತಿಯನ್ನು ನೆಲಸಮಗೊಳಿಸಿದೆ.ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?
Advertisement
Pained by the unlawful manner of demolition carried out in respect of N Convention, contrary to existing stay orders and Court cases.
I thought it fit to issue this statement to place on record certain facts for protecting my reputation and to indicate that we have not done any…
— Nagarjuna Akkineni (@iamnagarjuna) August 24, 2024
Advertisement
10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು (Tummidikunta Lake) ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ಅವಘಡ- ರವಿತೇಜಗೆ ಕೈಗೆ ಗಾಯ
Advertisement
Advertisement
ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.