ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

Public TV
2 Min Read
CM SUDEEP

ಬಾಗಲಕೋಟೆ: ಕರ್ನಾಟಕ ಕುರುಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು 5 ದಿನ ಇರುವಂತೆ ಸಿಎಂ ಅವರಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.

ಯಾವುದೇ ಕಾರಣಕ್ಕೂ ಬದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡಲ್ಲ. ಬಹಳ ವರ್ಷಗಳಿಂದ ನನಗೆ ಶ್ರೀರಾಮುಲು ಗೊತ್ತು. ಅವ್ರಿಗೆ ಒಳ್ಳೆಯದಾಗಲಿ ಎಂದು ನಟ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

ಸುದೀಪ್ ಬಳಸಿಕೊಂಡು ಬದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಮತಗಳಿಸಲು ಪ್ಲಾನ್ ಮಾಡಿದ್ದ ಸಿಎಂ ಅವರಿಗೆ, ಇದೀಗ ನಟ ಕಿಚ್ಚ ಸುದೀಪ್ ನಿರ್ಧಾರ ಶಾಕ್ ನೀಡಿದೆ. ಈ ಮೂಲಕ ಬದಾಮಿ ಕ್ಯಾಂಪೇನ್ ಕಣದಿಂದ ಹಿಂದೆ ಸರಿಯಲು ಶ್ರೀರಾಮುಲು ಅವರು ಸುದೀಪ್ ಮೇಲೆ ಒತ್ತಡ ಹೇರಿದ್ರಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.

SUDEEP CM.jpg 1

ಇದೇ ವೇಳೆ ಇಬ್ಬರೂ ಆತ್ಮೀಯರು, ಬದಾಮಿಯಲ್ಲಿ ರಾಮುಲು ಪರ ಪ್ರಚಾರ ನಡೆಸಲ್ಲ ಅಂತ ನಟ ಯಶ್ ಕೂಡ ಹೇಳಿದ್ದಾರೆ. ಈ ಮಧ್ಯೆ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಲಿದ್ದು, 33 ಹಳ್ಳಿಗಳನ್ನ ದರ್ಶನ್ ರೋಡ್ ಶೋ ಮಾಡಲಿದ್ದಾರೆ. ಇದನ್ನೂ ಓದಿ: ಸಿಎಂ ಪರ ನಟ ಸುದೀಪ್ ಪ್ರಚಾರಕ್ಕೆ ಶುರುವಾಯ್ತು ತೀವ್ರ ವಿರೋಧ

ವಾಲ್ಮಿಕಿ ಸಮುದಾಯದ ಮತ ಸೆಳೆಯಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀಪ್ ಅವರನ್ನು ತನ್ನ ಪರ ಪ್ರಚಾರ ನಡೆಸುವಂತೆ ಪ್ಲಾನ್ ಮಾಡಿದ್ದರು. ಈ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ದಲಿತ ಸಂಘಟನೆಗಳು ಸಿಎಂ ವಿರುದ್ಧ ಕಿಡಿಕಾರಿವೆ.

2013 ರಲ್ಲಿ ಪರಮೇಶ್ವರ ಸೋಲಿಸಿಲು ಸಿಎಂ ಒಳ ತಂತ್ರ ಮಾಡಿದ್ದಾರೆ. ಸದಾಶಿವ ವರದಿ ಮೂಲಕ ಎರಡ ಮತ್ತು ಬಲ ಸಮುದಾಯದ ನಡುವೆ ಒಡೆದಾಳುವ ನೀತಿ ಪಾಲನೆ ಮಾಡಿದ್ದಾರೆ. ಚೆಲುವಾದಿ ಅಭಿವೃದ್ಧಿ ನಿಗಮಸ್ಥಾಪಿಸದ ಹಿನ್ನೆಲೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ್, ಸತೀಶ್ ಜಾರಕೀಹೋಳಿ ಅವರನ್ನ ಸಂಪುಟದಿಂದ ಅರ್ಧಕ್ಕೆ ಸಿಎಂ ಕೈ ಬಿಟ್ಟಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರನ್ನ ಕಾಂಗ್ರೆಸ್ ನಿಂದ ಹೊರ ಹೋಗುವಂತೆ ಸಿದ್ದರಾಮಯ್ಯ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದು, ದಲಿತ ವಿರೋಧಿ ನೀತಿ ಪಾಲಿಸುವ ಸಿದ್ದರಾಮಯ್ಯಗೆ ಪಾಠ ಕಲಿಸಲು ಮುಂದಾದ ದಲಿತ ಸಂಘಟನೆ ಬದಾಮಿಯಲ್ಲಿ ದಲಿತರು ಸಿಎಂಗೆ ಮತ ಹಾಕದಂತೆ ಕರೆ ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *