ಅಮರಾವತಿ: ವೈಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ನೇತೃತ್ವದ ವೈಎಸ್‌ಆರ್‌ಸಿಪಿಗೆ ಭಾರಿ ಹಿನ್ನಡೆಯಾಗಿದ್ದು, ಇಬ್ಬರು ರಾಜ್ಯಸಭಾ (Rajya Sabha) ಸಂಸದರು ಪಕ್ಷಕ್ಕೆ ಮತ್ತು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್‌ಕರ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
YSRCP ಸಂಸದರಾದ ಮೋಪಿದೇವಿ ವೆಂಕಟರಮಣ ಮತ್ತು ಬೇಡಾ ಮಸ್ತಾನ್ ರಾವ್ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ವೆಂಕಟರಮಣ ಅವರ ಅವಧಿ 2026 ರ ಜೂನ್ ಹಾಗೂ ರಾವ್ ಅವರ ಅವಧಿ 2028 ರ ಜೂನ್ ವರೆಗೆ ಇತ್ತು. ಇಬ್ಬರೂ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಸೇರುವ ಸಾಧ್ಯತೆಯಿದೆ. ಇಬ್ಬರು ನಾಯಕರು ಇತ್ತೀಚೆಗೆ ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ರೇಪ್ ಹೇಗಾಗುತ್ತೆ ಎಂದು ಕಂಗನಾಗೆ ಕೇಳಿ, ಆಕೆಗೆ ರೇಪ್ ಅನುಭವ ಇದೆ: ಪಂಜಾಬ್ ಮಾಜಿ ಸಂಸದನ ವಿವಾದಿತ ಹೇಳಿಕೆ
Advertisement
Advertisement
ಇಬ್ಬರ ನಿರ್ಗಮನದಿಂದಾಗಿ, YSRCP ಮೇಲ್ಮನೆಯಲ್ಲಿ ಒಂಬತ್ತು ಮತ್ತು ಲೋಕಸಭೆಯಲ್ಲಿ ನಾಲ್ಕು ಸಂಸದರನ್ನು ಹೊಂದಿದೆ. ಇಂದು ರಾಜೀನಾಮೆ ನೀಡಿದ ಇಬ್ಬರು ಸಂಸದರು ಈ ಬಾರಿ ಟಿಡಿಪಿಯಿಂದ ರಾಜ್ಯಸಭಾ ಸಂಸದರಾಗಿ ಮರು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಇದು ಟಿಡಿಪಿಗೆ ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಅದು ಮೇಲ್ಮನೆಯಲ್ಲಿ ತನ್ನ ಖಾತೆಯನ್ನು ಪುನಃ ತೆರೆಯುತ್ತದೆ. 2019 ರಿಂದ ಪಕ್ಷ ಮೇಲ್ಮನೆಯಲ್ಲಿ ಸ್ಥಾನವನ್ನು ಹೊಂದಿಲ್ಲ.
Advertisement
ರಾವ್ ಅವರು ಮೊದಲು ಟಿಡಿಪಿಯಲ್ಲಿದ್ದರು. 2009 ರಿಂದ 2014 ರ ವರೆಗೆ ಆಂಧ್ರದ ಕವಾಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019 ರಲ್ಲಿ ಅವರು ವೈಎಸ್‌ಆರ್‌ಸಿಪಿಗೆ ಸೇರಿದರು. ವೆಂಕಟರಮಣ ಅವರು ಕಾಂಗ್ರೆಸ್‌ನಲ್ಲಿದ್ದರು. ಎರಡು ಬಾರಿ ಶಾಸಕರಾಗಿರುವ ಅವರು ಜಗನ್ ಮೋಹನ್ ರೆಡ್ಡಿ ಅವರ ತಂದೆ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವೈದ್ಯೆ ಜೊತೆ ಅನುಚಿತ ವರ್ತನೆ – ವಿವಾದಿತ ಆಪ್ ಶಾಸಕಿ ರಾಖಿ ಬಿರ್ಲಾ ತಂದೆ ವಿರುದ್ಧ ಎಫ್‍ಐಆರ್
Advertisement
ಚುನಾವಣೆ ಹಿನ್ನಡೆ ಬಳಿಕ ನಾಯಕರ ವಲಸೆಯಿಂದ ಕಂಗೆಟ್ಟಿರುವ ಜಗನ್ ಮೋಹನ್ ರೆಡ್ಡಿ ಅವರ ಪಕ್ಷಕ್ಕೆ ಈ ನಿರ್ಗಮನವು ಹೊಸ ಹೊಡೆತ ಕೊಟ್ಟಿದೆ. ಈ ಬಾರಿ ಕೇವಲ ನಾಲ್ಕು ಲೋಕಸಭಾ ಸ್ಥಾನಗಳನ್ನು ನಿರ್ವಹಿಸುವಂತಾಗಿದ್ದು, ಅದರ ರಾಜ್ಯಸಭೆಯ ಬಲವೂ ಕುಸಿಯುತ್ತಿದೆ. ದೆಹಲಿಯಲ್ಲಿ YSRCP ಪ್ರಭಾವ ಕ್ಷೀಣಿಸುತ್ತಿದೆ.