ಮಂಡ್ಯ: ಸಚಿವ ಸಂಪುಟದ ಸಚಿವರಿಬ್ಬರ ನಡುವೆ ಹಲವು ತಿಂಗಳುಗಳಿಂದ ಮಾತಿಲ್ಲ. ದೋಸ್ತಿಗಳಿಬ್ಬರ ನಡುವೆ ಮಹಾ ಬಿರುಕು ಬಿಟ್ಟಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುರೇಶ್ ಗೌಡ, ಸಚಿವರಾದ ಜಮೀರ್ (Zameer Ahmed Khan), ಚಲುವರಾಯಸ್ವಾಮಿ (Chaluvaraya Swamy) ಕಳೆದ 7-8 ತಿಂಗಳಿಂದ ಮಾತನಾಡುತ್ತಿಲ್ಲ. ಚಲುವರಾಯಸ್ವಾಮಿ ಪರ ಕ್ಯಾಂಪೇನ್‌ಗೂ ಬರಲಿಲ್ಲ. ಮುನಿಸಿಗೆ ಕಾರಣ ಏನೆಂದು ಚೆಲುವರಾಯಸ್ವಾಮಿ ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಫಾರೀನ್‌ಗೆ ಹೋಗುವ ಬಗ್ಗೆ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪಿಟ್ ಆಡೋಕೆ ಹೋಗಿದ್ರಾ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಜೊತೆಯಲ್ಲಿ ವ್ಯಾಪಾರ ಮಾಡಿಕೊಂಡು ಹೋದವರು. ಜಮೀರ್, ಚಲುವರಾಯಸ್ವಾಮಿ, ಆಪ್ತಮಿತ್ರರು. ಒಂದು ಬಾರಿಯಾದರೂ ಮಾತಾಡೋದು ನೋಡಿದ್ದೀರಾ ಟಿವಿಯಲ್ಲಿ? ಅವರು ಈಗ್ಯಾಕೆ ಮಾತನಾಡುತ್ತಿಲ್ಲ? ಒಂದು ಕಾಲದಲ್ಲಿ ಜಮೀರ್ ಸಾಹೇಬ್ರು ಆತನಿಗೆ ನೆಂಟರಲ್ವಾ? ಈಗ್ಯಾಕೆ ಇಲ್ಲ? ಈತ ಸ್ನೇಹದ್ರೋಹಿ, ಮಿತ್ರದೋಹಿ ಕೆಲಸವನ್ನು ಕರಗತ ಮಾಡ್ಕೊಂಡಿರೋನು. ಇವನು ಕುಮಾರಣ್ಣನ ಬಗ್ಗೆ ಮಾತನಾಡ್ತಾನೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Advertisement
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ ನೀಡಬೇಕು. ಚಲುವರಾಯಸ್ವಾಮಿ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದರು.
Advertisement
ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಕಡಿಮೆ ಎಂದರೂ ಇಲ್ಲಿಯವರೆಗೆ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆಯಲ್ಲಿ 100 ಕೋಟಿ, ಅಧಿಕಾರಿಗಳ ಬಳಿ ಲೂಟಿ ಸೇರಿ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಇಡೀ ಕಾಂಗ್ರೆಸ್ ಹಣ ಏರ್‌ಲಿಫ್ಟ್ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಫಂಡ್ ಹೋಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೇತುವೆ ನಿರ್ಮಿಸಿಕೊಡಿ ಪ್ಲೀಸ್: ಪ್ರಧಾನಿ ಮೋದಿಗೆ ಮಕ್ಕಳ ಪತ್ರ
ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲ್ಯಾಕ್ ಮನಿ ವೈಟ್ ಮಾಡಿದ್ದಾನೆ? ಅದೆಲ್ಲವೂ ಆಚೆ ಬರುತ್ತವೆ. ಇಡಿ ಕಣ್ಣು ಬಿಡಲಿದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರತ್ರ ಎಷ್ಟು ಕಲೆಕ್ಷನ್ ಮಾಡ್ತಿದಾನೆ, ಎಲ್ಲವೂ ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಸಿದ್ದರಾಮಯ್ಯ ತನಿಖೆ ಮಾಡಿಸಿದರೆ ಬ್ಲ್ಯಾಕ್ ಹೇಗೆ ವೈಟ್ ಆಗುತ್ತಿದೆ. ಯಾವ ಯಾವ ಥಿಯೇಟರ್ ತೆಗೆದುಕೊಳ್ಳದ್ದಕ್ಕೆ ಸಹಾಯ ಆಗಿದೆ ಗೊತ್ತಾಗುತ್ತದೆ. ತಿಂದವನು ಕಕ್ಕಲೇ ಬೇಕು. ಎಲ್ಲಾ ಮುಂದೆ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ಅಧಿಕಾರಿಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿನ 37 ಕ್ರಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ರು ತಿಳಿಯುತ್ತದೆ. ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಾರೆ. ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ಜೆಡಿ, ಎಡಿಗಳನ್ನು ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತ ಬಾಯಿ ಬಿಡ್ತಾರೆ. ಬ್ರೈನ್ ಮ್ಯಾಪಿಂಗ್ ನಮಗಲ್ಲ, ಚಲುವರಾಯಸ್ವಾಮಿಗೆ. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ತಿಳಿಯಬೇಕು ಅಲ್ವಾ? ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಟ್ಟೆ ವ್ಯಾಪಾರಿಯ ಹಣ ಎಗರಿಸಿದ್ದ ಆರೋಪಿ 24 ಗಂಟೆಯಲ್ಲಿ ಅರೆಸ್ಟ್
Web Stories