ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಯೂನಿಟ್ ಆರಂಭಕ್ಕೆ ಟೆಂಡರ್ ಅನ್ನು ನಿಯಮ ಬಾಹೀರವಾಗಿ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿರುದ್ಧ ನೀಡಿದ್ದ ಪ್ರಕರಣಕ್ಕೆ ಕ್ಲೀನ್ ಚಿಟ್ ದೊರೆತಿದೆ.
ಏನಿದು ಪ್ರಕರಣ?: 23.05.2016 ರಂದು ಸಿದ್ದರಾಮಯ್ಯ ನವರ ಪುತ್ರ ಯತೀಂದ್ರ ರವರು ನಡೆಸಿರುವ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆ ಅಡಿಯಲ್ಲಿ ಡಯಾಗ್ನೋಸ್ಟಿಕ್ ಸರ್ವೀಸಸ್ ಅನ್ನು ಪ್ರಾರಂಭಿಸಿಲು ಟೆಂಡರ್‍ನ್ನು ನಿಯಮಬಾಹಿರವಾಗಿ ನೀಡಿರುತ್ತಾರೆಂದು ಆಪಾದಿಸಿ, ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್ ಸಲ್ಲಿಸಿದ್ದ ದೂರನ್ನು ಎಸಿಬಿ ಗೆ ನೀಡಿದ್ದರು.
Advertisement
ಅರ್ಜಿಯ ವಿಚಾರಣೆಯಲ್ಲಿ ಭಾಸ್ಕರನ್ ಮಾಡಿರುವ ಆಪಾದನೆಗಳು ಸಾಬೀತಾಗದ ಕಾರಣ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಗೊಳಿಸಲಾಗದೆ ಎಂದು ಎಸಿಬಿ ತಿಳಿಸಿದೆ.
Advertisement
ಎಸಿಬಿ ಧೋರಣೆಗೆ ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದ್ದು, ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹೇಳಿಕೆಯನ್ನು ಪಡೆಯದೆ ಪ್ರಕರಣಕ್ಕೆ ಎಸಿಬಿ ತಿಲಾಂಜಲಿ ಇಟ್ಟಿದೆ ಎಂದು ಆರೋಪಿಸಿದ್ದಾರೆ.
Advertisement
Advertisement