ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ (DK Shivakumar) ಮತ್ತೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತನಿಖೆಗೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮತ್ತೆ ವಿಸ್ತರಣೆಯಾಗಿದೆ.
ಪ್ರಕರಣದ ಫೈಲ್ ಸಿಜೆ ಅಂಗಳಕ್ಕೆ ಹೋಗಿದೆ. ಈ ಹಿಂದೆ ನ್ಯಾ.ನಟರಾಜನ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠಕ್ಕೆ ವರ್ಗಾವಣೆ ಆಗಿದೆ. ಹೀಗಾಗಿ ಯಾವ ಪೀಠದಲ್ಲಿ ವಿಚಾರಣೆ ಮುಂದುವರಿಸಬೇಕು ಎಂದು ಸಿಜೆ ನಿರ್ಧಾರ ಮಾಡಲಿದ್ದಾರೆ. ಪ್ರಕರಣ ಫೈಲ್ ರಿಜಿಸ್ಟ್ರಾರ್‌ಗೆ ನ್ಯಾ.ನಾಗಪ್ರಸನ್ನ ಅವರು ಕಳುಹಿಸಿದ್ದಾರೆ. ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರೆಸಿ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪುತ್ತೂರುನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‍ಗೆ ದಂತದಿಂದ ತಿವಿದ ಕಾಡಾನೆ!
ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಈಗ ವಿಸ್ತರಣೆಯಾಗಿದೆ. ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ತಡೆಯಾಜ್ಞೆ ವಿಸ್ತರಣೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ತೆರವು ಮಾಡಿ ತನಿಖೆಗೆ ಅವಕಾಶ ಕೊಡಬೇಕು ಎಂದು ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಸಿಬಿಐ ತನಿಖೆಗೆ ಡಿ.ಕೆ.ಶಿವಕುಮಾರ್ ಕೋರ್ಟ್ನಿಂದ ತಡೆ ಪಡೆದಿದ್ದರು. ಕೋರ್ಟ್ ರಜಾ ದಿನಗಳ ಬಳಿಕ ಮತ್ತೆ ಅರ್ಜಿ ವಿಚಾರಣೆಯಾಗಲಿದೆ. ಇದನ್ನೂ: ಮುಸ್ಲಿಂ ಮಹಿಳೆಯರು ‘ಬೇಬಿ ಫ್ಯಾಕ್ಟರಿ’ ಎಂದು ಪೋಸ್ಟ್ ಹಾಕಿದ RSS ಕಾರ್ಯಕರ್ತ ಅರೆಸ್ಟ್