ಉಡುಪಿ: ಅನಾಕೊಂಡ ಹಾವಿನಂತೆ ಕಾಣುವ ದೊಡ್ಡ ಹೆಬ್ಬಾವೊಂದು ಜಿಲ್ಲೆಯ ಕುಕ್ಕಿಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಗಜಗಾತ್ರದ ದಷ್ಟ ಪುಷ್ಟ ಹೆಬ್ಬಾವೊಂದು ಆಹಾರ ಹುಡುಕಿಕೊಂಡು ಕಾಡಿನಿಂದ ನಗರ ಪ್ರದೇಶಕ್ಕೆ ಬಂದಿತ್ತು. ಹೆಬ್ಬಾವು ಸುಮಾರು 9 ಅಡಿ ಉದ್ದವಿದ್ದು, 40 ಕೆ.ಜಿಗೂ ಹೆಚ್ಚು ತೂಕ ಹೊಂದಿತ್ತು. ಶ್ರೀಕಾಂತ್ ಉಪಾಧ್ಯಾಯ ಎನ್ನುವವರ ಮನೆ ಆವರಣದಲ್ಲಿ ಹಾವು ಕಾಣಿಸಿಕೊಂಡಿದೆ. ಈ ಅಪರೂಪದ ಹೆಬ್ಬಾವನ್ನು ನೋಡಲು ಸ್ಥಳಕ್ಕೆ ನೂರಾರು ಜನ ಬಂದಿದ್ದರು. ಕೆಲವರು ಹಾವಿನೊಂದಿಗೆ ಸೆಲ್ಫಿ ತೆಗೆದುಕೊಂಡ್ರೆ ಇನ್ನೂ ಕೆಲವರು ಹೆಬ್ಬಾವನ್ನು ಮುಟ್ಟಿ ಖುಷಿ ಪಟ್ಟರು.
ಹೆಬ್ಬಾವನ್ನು ಹಿಡಿದ ಶ್ರೀಕಾಂತ್ ಉಪಾಧ್ಯಾಯ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಕಳೆದ ಮೂರು ದಿನಗಳಿಂದಲೂ ಹೆಬ್ಬಾವು ಮನೆ ಆವರಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೆಬ್ಬಾವುಗಳು ಗುಂಪು ಮಿಲನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದರಿಂದ ಒಂದೇ ಕಡೆಯಲ್ಲಿ ಹೆಚ್ಚು ಹೆಬ್ಬಾವುಗಳು ಕಾಣಸಿಗುತ್ತದೆ ಎಂದು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾವನ್ನು ಹಿಡಿದು, ಅಭಯಾರಣ್ಯಕ್ಕೆ ಬಿಟ್ಟುಬಂದರು. ಹೀಗೇ ಸುಮಾರು 1 ಗಂಟೆಗಳ ಕಾಲ ಹೆಬ್ಬಾವಿನಿಂದ ಸ್ಥಳದಲ್ಲಿ ಹೈಡ್ರಾಮವೇ ನಡೆದು ಹೋಯ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews