ತುಮಕೂರು: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೇವಿನ ಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್ ಅದರ ಕೆಳಗೆ ಇದ್ದ ನೂರಾರು ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಲೇಜು ಆವರಣದಲ್ಲಿ ಸುಮಾರು 100 ವರ್ಷ ಹಳೆಯ ಬೃಹತ್ ಗಾತ್ರದ ಬೇವಿನ ಮರವಿತ್ತು. ಈ ಮರ ಇಂದು ಧರೆಗುರುಳಿದ್ದು, ಈ ಮರದ ಕೆಳಗಡೆಯೇ ಇದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬೀಳುತ್ತಿರುವ ಶಬ್ಧ ಕೇಳಿ ಮರದ ಕೆಳಗಿದ್ದ ವಿದ್ಯಾರ್ಥಿನಿಯರು ದಿಕ್ಕಪಾಲಾಗಿ ಓಡಿದ್ದಾರೆ. ವಿದ್ಯಾರ್ಥಿನಿಯರು ಮರದ ಆಸುಪಾಸಿನಿಂದ ದೂರ ಓಡಿಬಂದ ಬಳಿಕ ಮರ ಉರುಳಿ ಬಿದ್ದಿದೆ.
Advertisement
Advertisement
ಮರ ಬೀಳುತ್ತಿರುವ ದೃಶ್ಯ ಹಾಗೂ ವಿದ್ಯಾರ್ಥಿನಿಯರು ಭಯದಿಂದ ದಿಕ್ಕಾಪಾಲಾಗಿ ಓಡಿದ ದೃಶ್ಯಗಳು ಕಾಲೇಜಿನ ಆವರಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದ ತಕ್ಷಣ ಯಾರಾದರೂ ಅದರಡಿಗೆ ಸಿಲುಕಿದ್ದಾರಾ ಎಂದು ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಹಾಗೂ ಇತರೆ ವಿದ್ಯಾರ್ಥಿನಿಯರು ಮರದ ಬಳಿ ಹೋಗಿ ನೋಡುತ್ತಿರುವ ದೃಶ್ಯಗಳು ಕೂಡ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.
Advertisement
ಸದ್ಯ ಸ್ಥಳಕ್ಕೆ ಎನ್‍ಇಪಿಎಸ್(ನ್ಯೂ ಎಕ್ಸಟೆಕ್ಷನ್ ಪೊಲೀಸ್ ಠಾಣೆ) ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.