ಪಾಟ್ನಾ: ವಿಕಾಸಶೀಲ್ ಇನ್ಸಾನ್ ಪಾರ್ಟಿ(ವಿಐಪಿ)ಯ ಮೂವರು ಶಾಸಕರು ಬುಧವಾರ ಪಕ್ಷವನ್ನು ತೊರೆದು ಮುಖೇಶ್ ಸಹಾನಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಐಪಿಯು ಬಿಜೆಪಿ, ಜನತಾ ದಳ ಯುನೈಟೆಡ್ (ಜೆಡಿಯು) ಮತ್ತು ಹಿಂದೂಸ್ತಾನ್ ಅವಾಮಿ ಮೋರ್ಚಾ (ಎಚ್‍ಎಎಂ) ವನ್ನು ಒಳಗೊಂಡಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ಮಿತ್ರ ಪಕ್ಷವಾಗಿದ್ದು, ಇದೀಗ ವಿಐಪಿ ತೊರೆದು ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನಾರಂಭಿಸಿ: ಸೋನಿಯಾ ಗಾಂಧಿ
ಈ ಮೂವರು ಶಾಸಕರು ವಿಐಪಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ವಿಧಾನಸಭೆಯಲ್ಲಿ 77 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೆ, 75 ಶಾಸಕರನ್ನು ಹೊಂದಿರುವ ಮೂಲಕ ಆರ್‍ಜೆಡಿಯು ಎರಡನೇ ಸ್ಥಾನಕ್ಕೀಳಿದಿದೆ. ಜೆಡಿಯು 45, ಕಾಂಗ್ರೆಸ್ 19 ಮತ್ತು ಎಡಪಕ್ಷಗಳು 15 ಶಾಸಕರನ್ನು ಹೊಂದಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖೇಶ್ ಸಹಾನಿ ನೇತೃತ್ವದ ವಿಐಪಿ ಪಕ್ಷವು ಬಿಜೆಪಿ ವಿರುದ್ಧ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಏಪ್ರಿಲ್ 12 ರಂದು ನಡೆಯಲಿರುವ ಬೋಚಾಹಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಬೇಬಿ ಕುಮಾರಿ ವಿರುದ್ಧ ಗೀತಾ ದೇವಿ ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ
ಸದ್ಯ ಮುಖೇಶ್ ಸಹಾನಿ ಎಂಎಲ್‍ಸಿ ಆಗಿದ್ದು, ಜುಲೈನಲ್ಲಿ ಅವರ ಅವಧಿ ಮುಕ್ತಾಯವಾಗಲಿದೆ. ಅಲ್ಲದೇ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಎನ್‍ಡಿಎ ಸರ್ಕಾರದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದಾರೆ.