ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನೂಕುಲಕ್ಕಾಗಿ ಕಲಬುರಗಿಯಲ್ಲಿ ಜಿಮ್ಸ್ ಮೆಡಿಕಲ್ ಕಾಲೇಜು ಆರಂಭಿಸಲಾಗಿದ್ದು, ಇದರ ಪಿಠೋಪಕರಣ ಖರೀದಿಯಲ್ಲಿ ಇದೀಗ ಅವ್ಯವಹಾರದ ಆರೋಪ ಕೇಳಿಬಂದಿದೆ.
ಕಲಬುರಗಿಯ ಜಿಮ್ಸ್ ಮೆಡಿಕಲ್ ಕಾಲೇಜಿನ ಪಿಠೋಪಕರಣ ಖರೀದಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಲಾಗಿದೆ. 2015-16ನೇ ಸಾಲಿನಲ್ಲಿ ಪಿಠೋಪಕರಣ ಖರೀದಿಗಾಗಿ ಕರೆದಿದ್ದ ಟೆಂಡರ್ ನಲ್ಲಿ ಒಟ್ಟು 25 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಕೆಟಿಟಿಪಿ ಕಾಯ್ದೆ ಪ್ರಕಾರ ಒಂದು ಬಿಡ್ ಬಂದ್ರೆ ಕರೆದ ಟೆಂಡರ್ ರದ್ದುಪಡಿಸಿ ಮತ್ತೊಮ್ಮೆ ಟೆಂಡರ್ ಕರೆಯಬೇಕಿತ್ತು. ಆದರೆ ಇಲ್ಲಿನ ಅಧಿಕಾರಿಗಳು ನಿಯಮ ಉಲಂಘಿಸಿ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದಾರೆ.
Advertisement
Advertisement
ಜಿಮ್ಸ್ ಕಾಲೇಜಿನ ಪಿಠೋಪಕರಣ ಸೇರಿದಂತೆ ಇತರೆ ವಸ್ತುಗಳಿಗಾಗಿ ಸರ್ಕಾರ 15 ಕೊಟಿಯ ಟೆಂಡರ್ ಕರೆದಿದ್ದು, ಪ್ರತಿ ವಸ್ತುವಿನಲ್ಲೂ ಎರಡರಿಂದ ಮೂರು ಪಟ್ಟು ಹಣ ಹೆಚ್ಚಿಗೆ ಪಡೆಯಲಾಗಿದೆ. ಸದ್ಯ ಅಡಿಟ್ ವರದಿಯಲ್ಲಿ ಇದು ಉಲ್ಲೇಖವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟಿಲ್ ರನ್ನ ಕೇಳಿದ್ರೆ, ಅವ್ಯವಹಾರ ನಡೆದಿದ್ರೆ ತನಿಖೆ ನಡೆಸ್ತೀವಿ ಎಂದು ಹೇಳುತ್ತಾರೆ.