ಚಿಕ್ಕೋಡಿ/ಬೆಳಗಾವಿ: ಕೃಷ್ಣಾ ನದಿ ನೀರಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಜನ ಮೀಗಾರಿಕೆ ಆರಂಭಿಸಿದ್ದು, ಇದೇ ವೇಳೆ 12 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಕ್ಕಿದೆ.
Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು – ಕಲ್ಲೋಳ ಸೇತುವೆ ಬಳಿ 12 ಕೆ.ಜಿ. ತೂಕದ ಮೀನು ಬಲೆಗೆ ಬಿದ್ದಿದೆ. ಬೋರಗಾಂವ ಪಟ್ಟಣದ ಹೈದರ ಅವರಿಗೆ ಮೀನು ಸಿಕ್ಕಿದೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ಸಿಕ್ಕಿರುವುದಕ್ಕೆ ಹವ್ಯಾಸಿ ಮೀನಗಾರ ಹೈದರ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ನದಿಯ ಬಲೆಯಲ್ಲಿ ಸಿಗುವುದು ಕಡಿಮೆ. ಸಿಕ್ಕಿರುವದಕ್ಕೆ ಸಂತಸವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ಎಟಿಎಂ ಕಾರ್ಡ್ ನೀಡುವುದಾಗಿ 1 ಲಕ್ಷ ಪಂಗನಾಮ
Advertisement
Advertisement
ಕೃಷ್ಣಾ ನದಿ ಈಗ ಮೀನುಗಾರರ ತಾಣವಾಗಿ ಪರಿಣಮಿಸಿದೆ. ಬೃಹದಾಕಾರದ ಮೀನುಗಳು ಸಿಗುತ್ತಿರುವ ಕಾರಣ ನದಿ ತೀರದಲ್ಲಿ ಜನ ಮೀನು ಹಿಡಿಯಲು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಎರಡು ಮೂರು ಗಂಟೆಗಳ ಪ್ರಯತ್ನದ ಬಳಿಕ ಈ ಬೃಹತ್ ಮೀನು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.