ಬೆಂಗಳೂರು: ಇಂದು ನಡೆದ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೆಲಕಾಲ ನಾಯಕರ ನಡುವೆಯೇ ಕೋಲಾಹಲ ನಡೆಯಿತು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡುವಾಗ, ಕುಮಾರಸ್ವಾಮಿಯವರು ಅಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್‍ವರ ಬೆನ್ನಿಗೆ ಚೂರಿ ಹಾಕಿ ದ್ರೋಹ ಮಾಡಿ ನೀವು ಅವರ ಸಾವಿಗೆ ಕಾರಣವಾಗಿದ್ದೀರಿ. ಕಾಂಗ್ರೆಸ್‍ಗೆ ಕೈ ಕೊಟ್ಟು ನಮ್ಮ ಜೊತೆ ಬಂದು ಸಿಎಂ ಆದವರು ನೀವು ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪರ ಮಾತಿಗೆ ಆಕ್ಷೇಪ ವ್ಯಕ್ತಡಿಸಿದ ಸಿಎಂ ಮತ್ತು ಇತರೆ ಕಾಂಗ್ರೆಸ್ ನಾಯಕರು, ಸಾವಿಗೆ ಕಾರಣ ಎಂಬ ಪದ ಅಸಂವಿಧಾನಿಕ. ಬಿಜೆಪಿಯವರು ಸಾವಿನ ರಾಜಕಾರಣ ಮಾಡುತ್ತಿದ್ದಾರೆ ತಿರುಗೇಟು ನೀಡಲು ಆರಂಭಿಸಿದರು. ಈ ವೇಳೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಕೆಲಕಾಲ ಮಾತಿನ ಚಕಮಕಿ ಏರ್ಪಟ್ಟಿತ್ತು. ಇತ್ತ ಕಲಾಪದಲ್ಲಿದ್ದ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಯಡಿಯೂರಪ್ಪರ ಮಾತಿಗೆ ಕಿಡಿಕಾರಿದ್ರು.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಧರಂಸಿಂಗ್ ಅವರ ವಿಚಾರ ಇಲ್ಲಿ ಅಪ್ರಸ್ತುತ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆಯಾದ 11 ವರ್ಷಗಳ ನಂತರ ಸ್ವರ್ಗವಾಸಿಗಳಾಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಒಂದೆರೆಡು ತಿಂಗಳಿಗೆ ದಿವಂಗತರಾಗಿದ್ದರೆ ಯಡಿಯೂರಪ್ಪರ ಮಾತು ಪೂರಕ ಅಂತಾ ಹೇಳಬಹುದು ಎಂದು ಹೇಳಿ ಚರ್ಚೆಯನ್ನು ನಿಯಂತ್ರಣಗೊಳಿಸಿ ಕಲಾಪ ಸುಗಮವಾಗಿ ಸಾಗುವವಂತೆ ನೋಡಿಕೊಂಡರು.
https://youtu.be/3-xpV9vWtNo