ಬೆಂಗಳೂರು: ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ `ಕ್ಷೇತ್ರ’ ತ್ಯಾಗ ಮಾಡಿದ ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಬದುಕು ಈಗ ಮಸುಕಾಗುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರೋ ದೇವೇಗೌಡರಿಗೆ ಕಾಂಗ್ರೆಸ್ಸಿನ ಶಾಸಕರೇ ಮಗ್ಗಲ ಮುಳ್ಳಾಗಿದ್ದಾರೆ.
ಹೊಸ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೇ? ಅಥವಾ ಬೇಡ್ವೇ? ಎಂದು ಗೌಡರು ಸಮೀಕ್ಷೆ ನಡೆಸುತ್ತಿರುವಾಗಲೇ ಕಾಂಗ್ರೆಸ್ಸಿನ ಶಾಸಕರು ಷರತ್ತುಗಳ ಮೇಲೆ ಷರತ್ತು ವಿಧಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರಾದ ಎಸ್.ಟಿ. ಸೋಮಶೇಖರ್, ಬೈರತಿ ಸುರೇಶ್, ಬೈರತಿ ಬಸವರಾಜು, ಅಖಂಡ ಶ್ರೀನಿವಾಸಮೂರ್ತಿ ಈ ಷರತ್ತುಗಳನ್ನು ಈಡೇರಿಸಿದ್ದರಷ್ಟೇ ದೇವೇಗೌಡರ ಪರ ಕೆಲಸ ಮಾಡೋದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಕಾಂಗ್ರೆಸ್ಸಿನ ಶಾಸಕರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಮಾತುಕತೆ ನಡೆಸಿದ್ದಾರೆ. ಶಾಸಕರ ಡಿಮ್ಯಾಂಡ್ ಬಗ್ಗೆ ಸಿಎಂ ಹಾಗೂ ದೇವೇಗೌಡರ ಜೊತೆ ಚರ್ಚಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ದೇವೇಗೌಡರ ಪರ ಕೆಲಸ ಮಾಡಲು ಕೈ ಶಾಸಕರು ಕೆಲವೊಂದು ಷರತ್ತುಗಳು ಈ ಕೆಳಗಿನಂತಿವೆ.
1. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಬೇಕು
2. ಅನುದಾನ ತಾರತಮ್ಯ ಬಗೆಹರಿಸಬೇಕು
3. ಅನುದಾನವನ್ನು ಬಿಡುಗಡೆ ಮಾಡಬೇಕು
4. ಬೇಡಿಕೆಗಳನ್ನು ಈಡೇರಿಸಿದ್ರೆ ಗೌಡರ ಪರ ಕೆಲಸ
Advertisement
ತುಮಕೂರಲ್ಲಿ ದೇವೇಗೌಡರು ನಿಂತರೆ ಸೊಲಿಸ್ತೀವಿ ಎಂದು ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು ಎಂದು ತುಮಕೂರಲ್ಲಿ ಪ್ರತಿಭಟನೆ ನಡೆಸಿದ ರಾಜೇಂದ್ರ ಬೇರೆ ಯಾರಿಗಾದ್ರೂ ಟಿಕೆಟ್ ನೀಡಿದರೆ ನಾಳೆ ವೋಟ್ ಕೇಳೋಕು ಕಷ್ಟ ಆಗುತ್ತದೆ. ಸಮ್ಮಿಶ್ರ ಸರ್ಕಾರ ಏನಿದ್ರೂ ಬೇರೆ ಜಿಲ್ಲೆಗೆ, ನಮ್ಮ ಜಿಲ್ಲೆಗೆ ಕಾಂಗ್ರೆಸ್ ಮಾತ್ರ ಅಂತ ಗುಡುಗಿದ್ದಾರೆ. ತುಮಕೂರು ಕ್ಷೇತ್ರಕ್ಕಾಗಿ ಕೈ ಅಂಗಳದಲ್ಲಿ ಕೊನೆ ಕ್ಷಣದಲ್ಲೂ ಕಸರತ್ತು ಮುಂದುವರೆದಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ದೆಹಲಿಗೆ ದೌಡಾಯಿಸಿದ್ದಾರೆ.
Advertisement
https://www.youtube.com/watch?v=hiM7qCnpWlA