ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಹೊಸ ವ್ಯಾಖ್ಯಾನ ಬರೆಯಲು ಹೊರಟಿದ್ದು, ಕುಟುಂಬದಲ್ಲಿ ರಾಜಕೀಯಾಸಕ್ತಿರುವ ಎಲ್ಲರನ್ನೂ ಪೊಲಿಟಿಷಿಯನ್ ಮಾಡಲು ಪ್ಲಾನ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆಗೆ ದೇವೇಗೌಡರು ಚಾಣಕ್ಯ ತಂತ್ರ ಹೆಣೆಯುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಈ ಕುಟುಂಬದಿಂದ ಲೋಕಸಭೆ ಚುನಾವಣಾ ಕಣಕ್ಕೆ ಮೂವರು ಸ್ಪರ್ಧೆ ಮಾಡುತ್ತಿದ್ದಾರೆ. ಮೂವರ ಪೈಕಿ ಮೊದಲನೇಯವರೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಇವರು ಈ ಹಿಂದೆ ರಾಜಕೀಯ ಸನ್ಯಾಸ ಕೈಗೊಳ್ಳುತ್ತೀನಿ ಎಂದು ಹೇಳಿದ್ದರು. ಆದರೆ ಈಗ ಮುಂಬರುವ ಲೋಕಸಭೆ ಸಮರದಲ್ಲಿ ಖುದ್ದು ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ನಿಲ್ಲಲಿದ್ದಾರೆ ಎನ್ನಲಾಗಿದೆ.
Advertisement
Advertisement
ಸಿಎಂ ಕುಮಾರಸ್ವಾಮಿ 2014ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈಗ ಮಗ ಸೋತಿದ್ದ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕೆ ಜಿಗಿಯಲಿದ್ದು, ಚಿಕ್ಕಬಳ್ಳಾಪುರದಲ್ಲಿ ಮಗನ ಸೋಲನ್ನೇ ಮೆಟ್ಟಿ ನಿಂತು ಜಯಿಸಲು ದೇವೇಗೌಡು ನಿರ್ಧಾರ ಮಾಡಿದ್ದಾರೆ. ದೇವೇಗೌಡರ ಸ್ಪರ್ಧೆಯಿಂದ ಕಾಂಗ್ರೆಸ್ಸಿನಲ್ಲಿ ಕುತೂಹಲ ಹುಟ್ಟಿಸಿದ್ದು, ಗೌಡರ ಸ್ಪರ್ಧೆಯಿಂದ ವೀರಪ್ಪ ಮೊಯ್ಲಿಗೆ ಟಿಕೆಟ್ ತಪ್ಪಿಸಲಾಗುತ್ತಾ?, ಗೌಡರ ಸ್ಪರ್ಧೆಗೆ ವೀರಪ್ಪ ಮೊಯ್ಲಿ ಸುಲಭವಾಗಿ ಒಪ್ಪಿಕೊಂಡು ಬಿಡ್ತಾರಾ? ಎನ್ನುವಂತಹ ಪ್ರಶ್ನೆ ಮೂಡಿದೆ. ಆದರೆ ದೇವೇಗೌಡರು ಚಿಕ್ಕಬಳ್ಳಾಪುರ ಟಿಕೆಟ್‍ಗೆ ಈಗಿನಿಂದಲೇ ಲೆಕ್ಕಾಚಾರ ಶುರುವಾಗಿದೆ ಎಂದ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಹಾಸನ ಮತ್ತು ಮಂಡ್ಯದಲ್ಲಿ ಮೊಮ್ಮಕ್ಕಳನ್ನು ಕಣಕ್ಕೆ ಇಳಿಸಲು ದೇವೇಗೌಡರು ನಿರ್ಧಾರ ಮಾಡಿದ್ದು, ಹಾಸನ ಲೋಕಸಭೆ ಕ್ಷೇತ್ರದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಒಕ್ಕಲಿಗ ಮತದಾರರು ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಲು ಗೌಡರು ಚಿಂತನೆ ಮಾಡಿದ್ದಾರೆ. ಈ ಮೂಲಕ ಮೊಮ್ಮಕ್ಕಳನ್ನು ಗೆಲ್ಲಿಸಿ, ತಾವೂ ಗೆದ್ದು ಸಂಸತ್ ಪ್ರವೇಶಕ್ಕೆ ದೇವೇಗೌಡರು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಇದರ ಆಚೆಗೂ ದೇವೇಗೌಡರು ರಾಜಕೀಯ ತಂತ್ರ ಹೆಣೆದಿದ್ದಾರೆ. ಇಬ್ಬರು ಸೊಸೆಯಂದಿರಿಗೂ ರಾಜ್ಯ ರಾಜಕೀಯದಲ್ಲಿ ಗಟ್ಟಿ ವೇದಿಕೆ ಹಾಕಿಕೊಡಲು ಪ್ಲಾನ್ ಮಾಡಿದ್ದು, ಸಿಎಂ ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿಗೆ ರಾಮನಗರ ಫಿಕ್ಸ್ ಆಗಿದೆ. ಹಾಗಾಗಿ ರಾಮನಗರದಲ್ಲಿ ರಾಜಕೀಯ ಭವಿಷ್ಯ ಗಟ್ಟಿಗೊಳಿಸಿಕೊಳ್ಳಲು ದೇವೇಗೌಡರು ರಣತಂತ್ರ ರೂಪಿಸಿದ್ದಾರೆ.
ಅನಿತಾ ಕುಮಾರಸ್ವಾಮಿ ಅಷ್ಟೇ ಅಲ್ಲ ಸಚಿವ ರೇವಣ್ಣರ ಪತ್ನಿ ಭವಾನಿ ರೇವಣ್ಣರಿಗೂ ರಾಜಕೀಯ ಪ್ರವೇಶಕ್ಕೆ ವೇದಿಕೆ ಮಾಡಿ ಕೊಡಲು ಗೌಡರು ಪ್ಲಾನ್ ಮಾಡಿದ್ದಾರೆ. ಮೊದಲ ಸೊಸೆಗೆ ರಾಜಕೀಯ ಅಸ್ತಿತ್ವ ಕೊಡಿಸಲು ಸೂಕ್ತ ಸನ್ನಿವೇಶಕ್ಕೆ ಕಾಯುತ್ತಿದ್ದಾರೆ. ಸದ್ಯ ಭವಾನಿ ರೇವಣ್ಣರಿಗೆ ರಾಜಕೀಯ ನೆಲೆ ಸಿಕ್ಕಿಬಿಟ್ಟರೆ ಗೌಡರ ಚಾಣಕ್ಯ ತಂತ್ರಕ್ಕೆ ಅಲ್ಪ ವಿರಾಮ ಸಿಗಲಿದೆ ಎಂಬುದಾಗಿ ತಿಳಿದುಬಂದಿದೆ.
https://www.youtube.com/watch?v=0P2QdVxxhfM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv