ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಪತ್ರಕರ್ತ ರವಿಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದು. ಈ ಕುರಿತು ಶನಿವಾರದ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಎಂಟಿ ನಾಣಯ್ಯ ಹಾಗೂ ಠಾಗೂರ್ ಜೊತೆ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ.
* ಅನುಮಾನ ಬಂದ ತಕ್ಷಣ ಬಂಧನ ಮಾಡ್ತಾರಾ? ಅಥವಾ ಅದಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಬಳಿಕ ಕ್ರಮ ಕೈಗೊಳ್ಳುತ್ತಾರಾ?
ಅನುಮಾನ ಬಂದ ತಕ್ಷಣ ಓರ್ವ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದ್ರೆ ಅದು ಸ್ವಲ್ಪ ಮಟ್ಟಿಗಾದ್ರು ಸಾಕ್ಷಿಭೂತವಾಗಿರುತ್ತೆ. ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಾರೀ ದೊಡ್ಡ ಆಘಾತವಾಗುತ್ತೆ ಅಂತಂದ್ರೆ ಮಾತ್ರ ಆತನನ್ನು ಬಂಧಿಸಲಾಗುತ್ತೆ.
Advertisement
Advertisement
ನಿಮಗೆ ಈ ಸುದ್ದಿ ಕೇಳಿ ಅಚ್ಚರಿಯಾಯ್ತಾ ಅಂತ ಠಾಗೋರ್ ಅವರನ್ನು ಕೇಳಿದಾಗ, ಅವರು ನನಗೆ ನಿಜಕ್ಕೂ ಇದೊಂದು ಅಚ್ಚರಿ ಅಂತ ಅನಿಸಿಲ್ಲ. ಯಾಕಂದ್ರೆ ನಾನು ಅವರನ್ನು ಕಿರಿತೆರೆಯಿಂದ, ಅವರು ಬರೆದ ಪುಸ್ತಕಗಳ ಹಾಗೂ ಕಪ್ಪು ಹಣದ ಬಗ್ಗೆ ಬರೆದ ಲೇಖನಗಳನ್ನು ನಾನು ಓದುತ್ತಾ ಬಂದಿದ್ದೇನೆ. ಅವರು ಬೆಳೆದು ಬಂತ ರೀತಿಯನ್ನು ನೋಡಿದ್ರೆ ಅಚ್ಚರಿ ಅನಿಸಲ್ಲ. ಅಧಿಕಾರ ಮತ್ತು ಹಣದ ಮದ ಏರಿದ ಯಾರಿಗೂ ತಮ್ಮ ಪೂರ್ವ ಜನ್ಮ ಸ್ಮರಣೆಯಿರುವುದಿಲ್ಲ. ಇವರು ಈ ಪತ್ರಿಕೆಯನ್ನು ಆರಂಭಿಸುವ ಸಮಯದಲ್ಲಿ ನಾನು ವಿಜಯಪುರದಲ್ಲಿ ಎಸ್ಪಿಯಾಗಿದ್ದೆ. ಆ ವೇಳೆ ನನ್ನ ಇನ್ನೊಬ್ಬ ಆತ್ಮೀಯ ಸಹೋದ್ಯೋಗಿ ಇವರನ್ನು ನನ್ನ ಬಳಿ ಕಳುಹಿಸಿಕೊಟ್ಟು, ಇವರೊಬ್ಬ ಒಳ್ಳೆಯ ಪತ್ರಕರ್ತ, ಸಾಹಿತಿ. ತುಂಬಾ ಚೆನ್ನಾಗಿ ಲೇಖನಗಳನ್ನು ಬರೆಯುತ್ತಾರೆ. ಸ್ವಲ್ಪ ಅವರಿಗೆ ಸಹಾಯ ಮಾಡಿ ಅಂತ ಹೇಳಿದ್ರು.
Advertisement
ಈ ವೇಳೆ ನಾನು ಏನು ಸಹಾಯ ಮಾಡಲಿ ಅಂದಾಗ ಅವರು ಏನಿಲ್ಲಾ ಕೆಲವೊಂದು ಪ್ರಕರಣಗಳ ನೈಜತೆಯನ್ನು ಅವರಿಗೆ ಕೊಡಿ ಅಂತ ಹೇಳಿದ್ರು. ಅವಾಗ ನಾನು ತನಿಖೆಯಲ್ಲಿದ್ದರೆ ಅಂತಹ ವಿಷಯಗಳನ್ನು ಕೊಡಲು ಸಾಧ್ಯವಿಲ್ಲ. ತನಿಖೆ ಆದ ಬಳಿಕ ಚಾರ್ಜ್ ಶೀಟ್ ನಂತ್ರ ಪ್ರಕರಣಗಳ ವಿಷಯಗಳನ್ನು ಕೊಡಬಹುದು ಅಂತ ಹೇಳಿದ್ದೆ ಅಂತ ಅವರು ವಿವರಿಸಿದ್ರು.
Advertisement
* ಕಾನೂನಾತ್ಮಕವಾಗಿ ಈ ಪ್ರಕರಣ ಗಟ್ಟಿಯಾಗಿದೆಯಾ?
ಅವನೊಬ್ಬ ಹೇಳಿಕೆ ಕೊಟ್ಟ ಅಂತ ಪೊಲೀಸರು ರವಿಬೆಳಗೆರೆ ಅವರನ್ನು ಬಂಧಿಸಿದ್ದಾರೆ. ಅವರ ಕಚೇರಿಗೆ ಬಂದು ಅಲ್ಲಿ ಸಾಕಷ್ಟು ಆಯುಧಗಳು ಸಿಕ್ಕಿದ್ದವು. ಆದ್ರೆ ಒಬ್ಬ ಮಾಧ್ಯಮ ವ್ಯಕ್ತಿ ಅನಧಿಕೃತವಾಗಿ ಇಂತಹ ಆಯುಧಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆಯಾ ಅಂತ ನಾಣಯ್ಯ ಪ್ರಶ್ನಿಸಿದ್ರು.
* ಒಂದು ಗನ್ ಇಟ್ಕೊಂಡವನು 40-50 ಲೈವ್ ಕಾಟ್ರೆಜನ್ನು ಇಟ್ಟುಕೊಳ್ಳಲು ಅವಕಾಶವಿದೆಯಾ?
ಇಲ್ಲ. ಯಾವುದೇ ಒಂದು ಆಯುಧ ಪರವಾನಿಗೆ ಕೊಡಬೇಕಾದ್ರೆ ಅವನಿಗಿರುವಂತಹ ಭಯ, ಹೆದರಿಕೆ ಅಥವಾ ಬೆದರಿಕೆಯ ಆಧಾರದ ಮೇಲೆ ಸಾಧರಣವಾಗಿ ಸುಮಾರು 20 ಗುಂಡುಗಳನ್ನು ಮಾತ್ರ ಇಟ್ಟುಕೊಳ್ಳಬಹುದು. ಅದರಕ್ಕಿಂದ ಜಾಸ್ತಿ ಅವಕಾಶವಿಲ್ಲ ಅಂತ ಠಾಕೋರ್ ಹೇಳಿದ್ರು.
ಅಲ್ಲದೆ ಒಂದು ಆಯುಧಕ್ಕೆ ಮಾತ್ರ ಅವಕಾಶವಿದೆ ಹೊರತು ಎರಡೆರಡು ಆಯುಧಕ್ಕೆ ಯಾವತ್ತು ಅವಕಾಶ ಕೊಡಲ್ಲ. ಎರಡನೇ ಆಯುಧ ಡಬಲ್ ಬ್ಯಾರೆಲ್ ಗನ್ ಆಗಿರುತ್ತದೆ. ತುಂಬಾ ದೂರ ಪ್ರಯಾಣ ಮಾಡುವಾಗ ಸ್ವಯಂ ರಕ್ಷಣೆಗಾಗಿ ಮಾತ್ರ ಇದನ್ನು ಇಟ್ಟುಕೊಳ್ಳಬಹುದು. ಆದ್ರೆ 50 ಗುಂಡುಗಳನ್ನು ಇಟ್ಟುಕೊಂಡಿರುವುದು ದುರುದ್ದೇಶವೇ ಸರಿ ಅಂತ ಅವರು ವಿವರಿಸಿದ್ರು.
ಕಾನೂನು ಬಾಹಿರವಾಗಿ ಆಯುಧಗಳು ಹಾಗೂ ಪ್ರಾಣಿಗಳ ಚರ್ಮಗಳನ್ನು ಇಟ್ಟುಕೊಂಡಿರುವುದು ಸರಿಯಲ್ಲ. ಅದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಸದ್ಯ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಬಂಧನ ಮಾಡಿದ 90 ದಿನದೊಳಗಡೆ ಚಾರ್ಜ್ಶೀಟ್ ಹಾಕ್ಬೇಕು ಅಂತ ವಕೀಲ ನಾಣಯ್ಯ ಹೇಳಿದ್ರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.
ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.
https://www.youtube.com/watch?v=3nx-qtIEjcg