ರಾಯಪುರ: ಬಿಜೆಪಿ ರಾಮನ ಹೆಸರಿನಲ್ಲಿ ಮತ ಪಡೆಯುತ್ತಿದೆ. ನಮ್ಮ ರಾಮನೇ ಬೇರೆ ಅವರ ರಾಮನೇ ಬೇರೆ ಎಂದು ಪಂಜಾಬಿನ ಕಾಂಗ್ರೆಸ್ ಸಚಿವ ರವೀಂದ್ರ ಚೌಬೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರಾಮ ಮತ್ತು ಅವರ ರಾಮನ ನಡುವೆ ದೊಡ್ಡ ವ್ಯತ್ಯಾಸವಿದೆ. ಬಿಜೆಪಿಗೆ ರಾಮ ಎಂದರೆ ದೇಣಿಗೆ ಸಂಗ್ರಹಿಸಲು ಮತ್ತು ವ್ಯಾಪಾರ ಮಾಡಲು ಒಂದು ಮಾರ್ಗ. ರಾಮ್‍ಶಿಲಾ ಪೂಜೆ ಹೆಸರಿನಲ್ಲಿ ಮತ ಕೇಳುವುದು. ರಾಮನ ಹೆಸರಿನಲ್ಲಿ ಜನಸಮೂಹದ ಹತ್ಯೆ ಮಾಡುವುದಾಗಿದೆ ಎಂದು ಚೌಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‍ನ ರಾಮನೆಂದರೆ ಶಬರಿಯ ರಾಮ, ನಿಶಾದ್ ರಾಜ್ ಅವರ ರಾಮ, ವನವಾಸದ ರಾಮ, ಮರ್ಯಾದಾ ಪುರುಷೋತ್ತಮ ರಾಮ. ದೇಶದ ಮೂಲೆ ಮೂಲೆಯಲ್ಲಿಯೂ ರಾಮನಿದ್ದಾನೆ. ರಾಮಲೀಲಾ ಆಯೋಜಿಸುವುದು ಕಾರ್ಯಕ್ರಮದ ಒಂದು ಭಾಗವಾಗಿರುತ್ತದೆ ಅಷ್ಟೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
9 ದಿನಗಳ ನವರಾತ್ರಿಯ ಸಂದರ್ಭದಲ್ಲಿ ದೇಶಾದ್ಯಂತ ರಾಮಾಯಣದ ನಾಟಕಗಳು ಹಾಗೂ ಪೂಜೆಯನ್ನು ನಡೆಸಲಾಗುತ್ತದೆ. ದಸರಾ ಹಬ್ಬದ 10ನೇ ದಿನವಾದ ವಿಜಯದಶಮಿಯಂದು ರಾವಣ, ಕುಂಭಕರ್ಣ ಹಾಗೂ ಮೇಘನಾದ್ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ.