‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಉಗ್ರಂ ಮಂಜು ಸ್ನೇಹಕ್ಕೆ ಮೋಕ್ಷಿತಾ ಗುಡ್ ಬೈ ಹೇಳಿರುವ ಬೆನ್ನಲ್ಲೇ ಈಗ ಗೌತಮಿ ಕೂಡ ಇಬ್ಬರ ಸ್ನೇಹ ಕಟ್ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಗೆಳೆಯ-ಗೆಳತಿ ಎಂದೇ ಫೇಮಸ್ ಆಗಿದ್ದ ಗೌತಮಿ ಜಾಧವ್ (Gouthami) ಹಾಗೂ ಮಂಜು (Ugramm Manju) ನಡುವೆ ಬಿರುಕು ಮೂಡಿದೆ.
ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಮಂಜುಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್ಎಂಕೆ – ರಾಧಿಕಾ ಪಂಡಿತ್ ಭಾವುಕ ಪೋಸ್ಟ್
ನಂತರ ನಡೆದ ಟಾಸ್ಕ್ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇದು ಮನೆ ಮಂದಿಗೆ ಅಚ್ಚರಿ ಮೂಡಿಸಿದೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ. ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ, ಗೌತಮಿ ಮಂಜುಗೆ ಬುದ್ಧಿ ಹೇಳಿದ್ದಾರೆ. ಆಗ ಮೋಕ್ಷಿತಾ ಅವರ ಏನು ಹೇಳಿದರು ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು. ಮೋಕ್ಷಿತಾ ಹೇಳಿದ್ದು ಸರಿ ಎನಿಸುತ್ತಿದೆ ಎಂದಿದ್ದಾರೆ.
ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸುತ್ತಾ ಇದೆ. ಅವರು ಹೇಳಿದ ಲೈನ್‌ಗಳು ನನಗೆ ಸರಿಯಾಗಿ ಇದೆ ಎಂದು ಅನಿಸಿತು. ನಾವು ಹೇಳುವ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿರುವ ಗೌತಮಿ, ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇದು ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಮುನಿಸು ಬಿಟ್ಟು ಗೌತಮಿ ಮತ್ತು ಮೋಕ್ಷಿತಾ (Mokshitha Pai) ಮತ್ತೆ ಒಂದು ಆಗ್ತಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.