ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಮಹತ್ತರ ಬದಲಾವಣೆ ತರಲಾಗಿದ್ದು, ಗೃಹ ಇಲಾಖೆ ಸೂಚನೆಯೊಂದಿಗೆ ಜೈಲನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ತನಿಖೆ ನಡೆದಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ: ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್
Advertisement
Advertisement
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಆರೋಪಿಗಳನ್ನು ಕೂಡ ಬೇರೆ ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಗ್ಯಾಂಗ್‌ನ್ನು ಕೂಡ ಎತ್ತಂಗಡಿ ಮಾಡಿಸಲಾಗಿತ್ತು. ಈಗ ಸದ್ಯ ಜೈಲಿನಲ್ಲಿ 5150ಕ್ಕೂ ಹೆಚ್ಚು ಜನ ಕೈದಿಗಳು ಇದ್ದಾರೆ.
Advertisement
ಸದ್ಯ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದು, ಜೈಲಿನ ಕ್ವಾರಂಟೈನ್ ವಿಭಾಗಕ್ಕೆ ಮಹಿಳಾ ಕೈದಿಗಳನ್ನು ಶಿಫ್ಟ್ ಮಾಡಲು ಮುಂದಾಗಿದ್ದು, 200ಕ್ಕೂ ಹೆಚ್ಚು ಜನ ಮಹಿಳಾ ಕೈದಿಗಳು ಶಿಫ್ಟ್ ಅಗಲಿದ್ದಾರೆ. ಮುಖ್ಯ ಜೈಲಿನ ಪಕ್ಕದಲ್ಲಿರುವ ಹೊಸದಾದ ಜೈಲಿಗೆ ಸಜಾಬಂಧಿಗಳು ಇರಲಿದ್ದು, ಮುಖ್ಯ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ಇರುವ ಸಾಧ್ಯತೆಯಿದೆ.
Advertisement
ಅಕ್ರಮದ ಅಡ್ಡೆಯಾಗಿದ್ದ ಪರಪ್ಪನ ಅಗ್ರಹಾರ ಜೈಲಿಗೆ ಹೊಂದಿಕೊಂಡಿರುವ ಕ್ವಾರಂಟೈನ್ ಜೈಲು ಕೊನೆಗೂ ಮಹಿಳಾ ಸೂಪರಿಟೆಂಡೆಂಟ್ ಜೊತೆಗೆ ಕೇವಲ ಮಹಿಳಾ ಕೈದಿಗಳಿಗೆ ಮಾತ್ರ ಸೀಮಿತವಾಗಲಿದೆ. ಪರಪ್ಪನ ಅಗ್ರಹಾರ ಮುಖ್ಯ ಜೈಲಿನಲ್ಲಿ 3400 ವಿಚಾರಣಾಧೀನ ಕೈದಿಗಳು ಮಾತ್ರ ಇರಲಿದ್ದಾರೆ. ಹೊಸದಾಗಿ ಸಿದ್ಧ ಆಗಿರುವ ಜೈಲಿನಲ್ಲಿ 1550 ಸಜಾ ಕೈದಿಗಳು ಶಿಫ್ಟ್ ಆಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನೂ ಸಂಪೂರ್ಣವಾಗಿ ನಿಲ್ಲಿಸಲು ಮುಂದಿನ ಒಂದು ವಾರದೊಳಗಾಗಿ ಪ್ರತ್ಯೇಕ ಜೈಲಿನಲ್ಲಿ ಡಿಜಿ ಒಬ್ಬರನ್ನು ನೇಮಕ ಮಾಡಿ, ಪ್ರತ್ಯೇಕ ಮೂರು ಜನ ಸೂಪರಿಟೆಂಡೆಂಟ್ ಕೂಡ ನೇಮಕ ಆಗಲಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇದನ್ನೂ ಓದಿ: ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ