ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ನೆಪದಲ್ಲಿ ಪದೇ ಪದೇ ರೂಲ್ಸ್ ಬ್ರೇಕ್ ಮಾಡ್ತಿದ್ರೂ ಸರ್ಕಾರ ಕಂಡು ಕಾಣದಂತೆ ಇದೆ. ಇಂದು ಕೇಂದ್ರ ಮಂತ್ರಿ ಭಗವಂತ್ ಖೂಬಾ ಬೀದರ್‍ನ ಹುಮ್ನಾಬಾದ್‍ನಲ್ಲಿ ಅದ್ಧೂರಿ ಮೆರವಣಿಗೆ ಹೋಗಿದ್ದಾರೆ. ಸಾವಿರ ಸಾವಿರ ಸಂಖ್ಯೆಯ ಕಾರ್ಯಕರ್ತರನ್ನು ಜಮಾವಣೆ ಮಾಡಿ, ಸಂಪೂರ್ಣವಾಗಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಂತರ ನಡೆದ ಸಭೆಯಲ್ಲೂ ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆ ನಡೆದಿದೆ. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಸಚಿವ ಪ್ರಭು ಚವ್ಹಾಣ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಆದ್ರೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದೆ. ಸಚಿವ ಈಶ್ವರಪ್ಪ ಮಾತ್ರ, ನಾನು ಮಾತ್ರ ಇದನ್ನು ಒಪ್ಪಲ್ಲ ಎಂದಿದ್ದಾರೆ.
ಬಿಗ್ ಬುಲೆಟಿನ್ | September 3, 2021 | ಭಾಗ-1
Leave a Comment