ದೇಶದ ಜಿಡಿಪಿ ಬೆಳವಣಿಗೆ ದರ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ ಮರುದಿನವೇ ಜನಸಾಮಾನ್ಯನಿಗೆ ಅಡುಗೆ ಅನಿಲದ ರೂಪದಲ್ಲಿ ಬಿಗ್ ಶಾಕ್ ತಗುಲಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ತಿಂಗಳಲ್ಲಿ ಎರಡನೇ ಬಾರಿಗೆ ಹೆಚ್ಚಿಸಿವೆ. ಪ್ರತಿ ಸಿಲಿಂಡರ್ ಮೇಲೆ ಇಂದು 25 ರೂಪಾಯಿ ದರ ಹೆಚ್ಚಿಸಲಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ದರ ಹೆಚ್ಚಿಸಲಾಗಿದೆ ಎಂದು ತೈಲ ಕಂಪನಿಗಳು ಸಮರ್ಥಿಸಿಕೊಂಡಿವೆ.
ಬಿಗ್ ಬುಲೆಟಿನ್ | SEPTEMBER 1, 2021 | ಭಾಗ 2
Leave a Comment