ರಾಜ್ಯದಲ್ಲಿ ಘಟಿಸಿದ ಯಾವುದೇ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ್ರೂ ತಮಗೆ ಗೊತ್ತಿಲ್ಲ. ಮಾಹಿತಿ ಪಡೆದು ಹೇಳ್ತೀವಿ..ಗಮನಿಸ್ತೀವಿ.. ಕ್ರಮ ತಗೋತೀನಿ ಎಂಬ ಸಿದ್ಧ ಉತ್ತರವನ್ನು ಮಂತ್ರಿ ಮಾಗಧರು ಹೇಳುತ್ತಾರೆ. ಅದ್ರಲ್ಲೂ ಬಿಜೆಪಿಯವರು ಮಾಡಿದ ಯಡವಟ್ಟುಗಳ ಬಗ್ಗೆ ಕೇಳಿದ್ರೆ, ಸರ್ಕಾರದಿಂದ ಆದ ಅವಾಂತರಗಳ ಬಗ್ಗೆ ಕೇಳಿದ್ರೆ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ವರ್ತಿಸುತ್ತಾರೆ. ಮುಖ್ಯಮಂತ್ರಿಯಿಂದ ಹಿಡಿದು ಮಂತ್ರಿಗಳವರೆಗೂ ಎಲ್ಲರೂ ಇದೇ ರೀತಿಯ ವರ್ತನೆ ತೋರುತ್ತಿದ್ದಾರೆ. ಇದನ್ನು ನೋಡಿದ್ರೆ ಡ್ರಾಮಾ ಅಂತಾ ಗೊತ್ತಾಗಿಬಿಡುತ್ತೆ. ಇಲ್ಲ ಎಂದರೇ, ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಇದು ಹತ್ತಾರು ಅನುಮಾನ ಮೂಡಿಸುತ್ತದೆ. ಮುಖ್ಯಮಂತ್ರಿಯಿಂದ ಹಿಡಿದು ಘನ ಸರ್ಕಾರದ ಮಂತ್ರಿಗಳವರೆಗೂ ನೀಡುವ ಪ್ರತಿಕ್ರಿಯೆಗಳನ್ನು ಉದಾಹರಣೆ ಸಹಿತ ತೋರಿಸ್ತೀವಿ ನೋಡಿ.
ಬಿಗ್ ಬುಲೆಟಿನ್ | September 4, 2021 | ಭಾಗ-1
Leave a Comment