ಪೆಟ್ರೋಲ್ ಬೆಲೆ ಇಳಿಕೆ ಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಡೀಸೆಲ್ ಬೆಲೆ ನೂರರ ಗಡಿಯಲ್ಲಿದೆ. ಅಡುಗೆ ತೈಲದ ಬೆಲೆಗಳು ಗಗನಮುಖಿಯಾಗಿವೆ. ಇದರ ಜೊತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಾರಣ, ಅಗತ್ಯ ವಸ್ತುಗಳ ಬೆಲೆಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿವೆ. ಟೋಲ್ ಸುಂಕವನ್ನು ಮೇಲಿಂದ ಮೇಲೆ ಹೆಚ್ಚಿಸಲಾಗ್ತಿದೆ. ಕೋವಿಡ್ ಮತ್ತು ಲಾಕ್‍ಡೌನ್ ಸಂಕಷ್ಟಗಳಿಂದ ಈಗೀಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನಸಾಮಾನ್ಯರು ಸರ್ಕಾರಗಳು ಹಾಕುತ್ತಿರುವ ಕರಭಾರದಿಂದ ತತ್ತರಿಸಿಹೋಗಿದ್ದಾರೆ.
ಬಿಗ್ ಬುಲೆಟಿನ್ | SEPTEMBER 1, 2021 | ಭಾಗ 1

Leave a Comment