ನವದೆಹಲಿ: ಬಿಗ್ ಬುಲ್ ಎಂದೇ ಪ್ರಸಿದ್ದಿ ಪಡೆದಿರುವ ಷೇರು ಹೂಡಿಕೆದಾರ ರಾಕೇಶ್ ಜುಂಜುನ್‌ವಾಲ ಬೆಂಬಲಿತ ‘ಆಕಾಶ ಏರ್ʼ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಿದ್ದು, ಮುಂದಿನ ತಿಂಗಳಿನಿಂದ ಸೇವೆ ಆರಂಭವಾಗಲಿದೆ.
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಕಾಶ ಏರ್ ಕಂಪನಿಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಲ್ಯಾಂಡ್ ಆಗಿದೆ.
Advertisement
ಮುಂದಿನ ವಾರ ಮತ್ತೊಂದು ವಿಮಾನ ಬರಲಿದೆ. ಶೀಘ್ರವೇ ಎರಡು ವಿಮಾನಗಳ ಮೂಲಕ ನಾವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಆಕಾಶ ಏರ್‌ನ ಸಿಇಒ ವಿನಯ್ ದುಬೆ ಮಾಹಿತಿ ನೀಡಿದ್ದಾರೆ.
Advertisement
Advertisement
ಕಡಿಮೆ ಟಿಕೆಟ್ ದರವನ್ನು ನಿಗದಿ ಪಡಿಸುವುದಾಗಿ ಈಗಾಗಲೇ ಹೇಳಿರುವುದರಿಂದ ಆಕಾಶ ಏರ್ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಟಯರ್ 2 , ಟಯರ್ 3 ನಗರಗಳಿಗೆ ವಿಮಾನ ಸೇವೆಯನ್ನು ನೀಡಲು ಕಂಪನಿ ಮುಂದಾಗಿದೆ.
Advertisement
ಆಕಾಶ ಕಂಪನಿ 72 ಬೋಯಿಂಗ್ 737 ಮ್ಯಾಕ್ಸ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ. ಇದನ್ನೂ ಓದಿ: ನಿನ್ನ ಅಹಂಕಾರ ನಾಲ್ಕೇ ದಿನ – ಸಂಜಯ್ ರಾವತ್ ಮನೆ ಎದುರು ಬ್ಯಾನರ್
ಈ ಹಿಂದೆ ಜೂನ್‌ನಲ್ಲಿಯೇ ಆಕಾಶ್ ಏರ್ ಕಾರ್ಯಾರಂಭ ಮಾಡುವುದಾಗಿ ಹೇಳಿತ್ತು. ಆದರೆ ತಾಂತ್ರಿಕ ಅಡಚಣೆಯಿಂದಾಗಿ ವಿಳಂಬವಾಗಿದ್ದು, ಒಂದು ತಿಂಗಳು ಮುಂದೂಡಲ್ಪಟ್ಟಿತ್ತು.
"The arrival of our first aircraft is a very happy moment for all of us & marks an important milestone, bringing us closer to our vision of building India’s greenest, most dependable, and most affordable airline", Vinay Dube, Founder, Managing Director & Chief Executive Officer. pic.twitter.com/0JLBHfkYGr
— Akasa Air (@AkasaAir) June 21, 2022
ಉದ್ಯಮಿ ರಾಕೇಶ್ ಜುಂಜುನ್‌ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್ ಈ ಆಕಾಶ್ ಏರ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, 2021ರ ಆಗಸ್ಟ್ ತಿಂಗಳಲ್ಲಿ ವಿಮಾನ ಕಾರ್ಯಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ದೊರೆಕಿತ್ತು. ಆದರೆ ಕೋವಿಡ್‌ನಿಂದಾಗಿ ಕಾರ್ಯಾಚರಣೆ ತಾತ್ಕಾಲಿವಾಗಿ ಮುಂದೂಡಲಾಗಿತ್ತು.
ವಿಮಾನಯಾನ ಸಚಿವಾಲಯದಿಂದ ನಿರಾಪೇಕ್ಷಣ ಪತ್ರ ದೊರೆತ ಬೆನ್ನಲ್ಲೇ, ಆಕಾಶ್ ಏರ್, ಏರ್ ಕ್ರಾಫ್ಟ್ ಖರೀದಿಗೆ ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2021 ಮಾರ್ಚ್ 26 ರಂದು ಬೋಯಿಂಗ್ 737 ಮಾದರಿಯ 72 ವಿಮಾನಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.