ಎರಡೂವರೆ ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿರುವ ಭಾರತೀಯ ಸಿನಿಮಾ ರಂಗ, ಚೇತರಿಸಿಕೊಳ್ಳಲು ಇನ್ನೂ ಹರಸಾಹಸ ಪಡುತ್ತಿದೆ. ಅಷ್ಟರಲ್ಲಿ ಚಿತ್ರರಂಗಕ್ಕೆ ಕ್ರಿಕೆಟ್ ಎಂಬ ಗುಮ್ಮ ಎದುರಾಗಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?
Advertisement
ಕೋವಿಡ್ ಕಾರಣದಿಂದಾಗಿ ಬಿಗ್ ಬಜೆಟ್ ನ ಸಾಕಷ್ಟು ಚಿತ್ರಗಳು ಮಾರ್ಚ್ ನಲ್ಲಿ ರಿಲೀಸ್ ಆಗಲು ಪ್ಲ್ಯಾನ್ ಆಗಿದ್ದವು. ಅದರಲ್ಲೂ ಮಾರ್ಚ್ ಎರಡನೇ ವಾರದ ನಂತರ ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿಂದ ಶುರುವಾಗುತ್ತಿದ್ದ ಈ ಬಿಡುಗಡೆಯ ಜೈತ್ರ ಯಾತ್ರೆ ಕೆಜಿಎಫ್ 2, ತೆಲುಗಿನ ಆರ್.ಆರ್.ಆರ್, ರಾಧೆ ಶ್ಯಾಮ್, ದಳಪತಿ ವಿಜಯ್ ಅವರ ‘ಬೀಸ್ಟ್’, ಮೆಗಾ ಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು. ಈಗ ಸರಿಯಾಗಿ ಥಿಯೇಟರ್ ಗೆ ಪೆಟ್ಟುಕೊಡುವಂತೆ ಮಾರ್ಚ್ 27 ರಿಂದ ಮೇ 28 ರವರೆಗೆ. ಬರೋಬ್ಬರು ಒಂದು ತಿಂಗಳ ಕಾಲ ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ ಆರಂಭವಾಗಲಿವೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು
Advertisement
Advertisement
ಒಂದು ತಿಂಗಳ ಕಾಲ ನಿರಂತರವಾಗಿ, ಅದರಲ್ಲೂ ವೀಕೆಂಡ್ ನಲ್ಲೂ ಈ ಕ್ರಿಕೆಟ್ ಹಾವಳಿ ಇರುವುದರಿಂದ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನ. ಈ ಹಿಂದೆಯೂ ಐಪಿಎಲ್ ಮತ್ತು ಸಾಕಷ್ಟು ಕ್ರಿಕೆಟ್ ಪಂದ್ಯಾವಳಿಗಳು ಸಿನಿಮಾಗಳ ಬಾಕ್ಸ್ ಆಫೀಸಿಗೆ ಭಾರೀ ಹೊಡೆತ ಕೊಟ್ಟಿವೆ. ಹಾಗಾಗಿ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು, ಐಪಿಎಲ್ ಗೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ
Advertisement
ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಮನರಂಜನಾ ಮಾಧ್ಯಮಕ್ಕೂ ಐಪಿಎಲ್ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಈ ವೇಳೆಯಲ್ಲಿ ಹೊಸ ಧಾರಾವಾಹಿಗಳಾಗಲಿ, ಹೊಸ ಹೊಸ ಶೋಗಳಾಗಲಿ ಪ್ರಾರಂಭವಾಗುತ್ತಿಲ್ಲ. ಐಪಿಎಲ್ ನಂತರವೇ ಹೊಸ ಹೊಸ ಕಾರ್ಯಕ್ರಮಗಳಿಗೆ ಪ್ಲ್ಯಾನ್ ಮಾಡಲಿವೆಯಂತೆ ಮನರಂಜನಾ ವಾಹಿನಿಗಳು.
ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರಗಳ ನಿರ್ಮಾಪಕರು ಐಪಿಎಲ್ ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡಬಹುದಾ? ಅಥವಾ ಐಪಿಎಲ್ ನಂತರ ರಿಲೀಸ್ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಸಿನಿಮಾಗಳನ್ನು ಮುಂದು ಹಾಕಿದರೆ, ಅದರಿಂದ ಬೇರೆ ಬೇರೆ ರೀತಿಯಲ್ಲಿ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಹಾಗಾಗಿ ಬಹುತೇಕ ಭಾರತೀಯ ಸಿನಿಮಾ ರಂಗಕ್ಕೆ ಆಘಾತಕ್ಕೆ ಒಳಗಾಗಿದೆ.