ಕಾರವಾರ: ಉಪರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಅವರು ಕೇಂದ್ರ ಬಿಜೆಪಿ ಸರ್ಕಾರ ತನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ಟೀಟ್ ಮಾಡಿರುವ ಅವರು, ದೊಡ್ಡಣ್ಣನಿಗೆ ಭಯ ಹಾಗಾಗಿ ರಾಜಕಾರಣಿಗಳ ಫೋನ್ ಟ್ಯಾಪ್ ಮಾಡುತ್ತಿದ್ದಾನೆ. ಆದರೆ ದೊಡ್ಡಣ್ಣನ ಈ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್
Advertisement
The fear that ‘Big Brother’ is always watching & listening permeates all conversations between politicians across party lines in ‘new’ India. MPs & leaders of parties carry multiple phones, frequently change numbers & talk in hushed whispers when they meet. Fear kills democracy.
— Margaret Alva (@alva_margaret) July 26, 2022
Advertisement
ನಾನು ಬಿಜೆಪಿಯಲ್ಲಿ ಇರುವ ನನ್ನ ಸ್ನೇಹಿತರು, ಆಪ್ತರಲ್ಲಿ ಫೋನ್ ಮೂಲಕ ಮಾತನಾಡಿದೆ. ಅದಾದ ಬಳಿಕ ನನ್ನ ಫೋನ್ ಕರೆಗಳೆಲ್ಲಾ ಡೈವರ್ಟ್ ಆಗುತ್ತಿದೆ. ಯಾವುದೇ ಕರೆ ಮಾಡಲು, ಸ್ವೀಕರಿಸಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
Advertisement
Dear BSNL/ MTNL,
After speaking to some friends in the BJP today, all calls to my mobile are being diverted & I'm unable to make or receive calls. If you restore the phone. I promise not to call any MP from the BJP, TMC or BJD tonight.
❤️
Margaret
Ps. You need my KYC now? pic.twitter.com/Ps9VxlGNnh
— Margaret Alva (@alva_margaret) July 25, 2022
Advertisement
ಇದಲ್ಲದೇ ನನ್ನ ಫೋನ್ ರೀ-ಕನೆಕ್ಟ್ ಮಾಡಿಕೊಡಿ. ಖಂಡಿತವಾಗಿಯೂ ಬಿಜೆಪಿ, ಟಿಎಂಸಿ ಮತ್ತು ಬಿಜೆಡಿಯ ಯಾವುದೇ ಸಂಸದರು, ಶಾಸಕರಿಗೆ ಕರೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ
ತಮ್ಮ ಟ್ಟಿಟ್ಟರ್‌ನಲ್ಲಿ ಬಿ.ಎಸ್.ಎನ್.ಎಲ್. ಹಾಗೂ ಎಮ್.ಟಿ.ಎನ್.ಎಲ್‍ಗಳನ್ನು ಟ್ಯಾಗ್ ಮಾಡಿ ಫೋಸ್ಟ್ ಮಾಡಿಕೊಂಡಿದ್ದಾರೆ.